Day: October 22, 2024

ಉಮರನ ಒಸಗೆ – ೪೦

ಹೊರಗೊಳಗೆ ಮೇಲೆ ಕೆಳಗೆ ಕಂಡೊಡಂ ಮಾಟಗಾರನ ನೆರಳ ಬೊಂಬೆಯಾಟವಿದು; ನೇಸರೆಂಬೊಂದು ದೀವಿಗೆಯ ನಡುವಣೊಳಿರಿಸಿ ಬೊಂಬೆಗಳನದರ ಬಳಿ ಸುಳಿಸುವಂತಿಹುದು. *****

ಎಲ್ಲಾ ಚಂದದ ಕನಸುಗಳೂ

ಎಲ್ಲಾ ಚಂದದ ಕನಸುಗಳೂ ಮಾಗಿಯಲೇ ಯಾಕೆ ಬರುತಾವೆ ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ ಹೊರಗೋ ತುಂತುರು ಹೇರಳ ಮಂಜು ಹಗಲೋ ಇರುಳೋ ತಿಳಿಯೋದೆ ಇಲ್ಲ ನಿದ್ದೆಯು ಒಂದೇ ಎಚ್ಚರವು […]

ಅವರು

ಇಲ್ಲಿ ಅವನು ಅಲ್ಲಿ ಅವಳು ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು. ಅದರ ಲಲ್ಲೆಯಲ್ಲಿ ನಲವಿ- ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು. ಬಿಸಿಲ ಹೊಳಪನೊಳಗೆ ಚೆಲ್ಲಿ ನೋಟದಿಂದ ಆಸೆಸರಳನವಳಿಗೆಸೆಯುತ ನಡೆವನೊಬ್ಬ […]