೧ ಅನ್ನ ದಾತನ ಮೇಲೆ. ಕೈಯೆತ್ತ ಬಾರದೆಂ- ದೆನ್ನುವಾ ತತ್ವದಲಿ ತಥ್ಯಾಂಶವಿದೆ; ಇರಲಿ! ಅನ್ನ ಧೊರಕಿಸ ಬಂದ ಮಾನವರು ಕುನ್ನಿಗಳೇ? ಪಶುಗಳೇ? ಕ್ರಿಮಿಗಳೇನು ಚೆನ್ನಾಗಿ-ಅರಿಯಿರೈ ಓ! ಅನ್ನ ದಾತೃಗಳೇ! ನಿನ್ನಿನಂತೆಯೆ ಇಂದು ಮುಂದು ಬಹ ದಿನಗಳಲಿ ಬೆನ್ನು ಮೂಳೆಯ ಮುರಿವೆನೆಂಬ ಗರುವದನುಡಿಯ ಗಂಟಲಲಿ ಹಿಡಿಯಿರಿನ್ನು! ೨...

ನಾನು ಇನ್ನೊಮ್ಮೆ ಮರಳಿ ಬರುವಾಗ ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ ಸತ್ಯವತಿಯಾಗಿ ಸತಿಯಾಗಿ ನೀನು ಖಂಡಿತ ನನಗೆ ಸಿಕ್ಕುತ್ತಿ ಹಳೆ ಪರಿಚಯ ಉಕ್ಕಿ ಬಂದು ಮನದಲ್ಲಿ ಬಿಕ್ಕುತ್ತಿ ಆಗ ನಿನ್ನ ವದನತುಂಬ ವಿರಹದ ನೋವಿನ ಗೆರೆಗಳನ್ನು ಬಿಸಿಯುಸಿರಿನಲ್...

ಎಲ್ಲಿ ಕಾರ್ಮುಗಿಲಿರುವುದೋ ಅಲ್ಲಿ ಹಗಲಿನ ನೆರಳು || ಎಲ್ಲಿ ಮನಗಳು ಹರಿವುದೋ ಅಲ್ಲಿ ತಿಳಿವಿನ ಅಲೆಗಳು || ಎಲ್ಲಿ ಚಂದಿರನ ಬೆಳದಿಂಗಳೋ ಅಲ್ಲಿ ಬೆಳಕಿನ ಹೊನಲು || ಎಲ್ಲಿ ತಾಯಿ ಕುಡಿಯ ಬೇರೋ ಅಲ್ಲಿ ಮಮತೆಯ ಸಸಿಗಳು || ಎಲ್ಲಿ ಬಂಜೆತನದ ಬಾಳಿಹುದೋ ...

(ಮುಂದಿನ ಸಲ ಮದುವೆಯಾಗಲು ಸಿದ್ಧನಾದ ಮುದಿ ಮದುಮಗನೊಬ್ಬನು ತನ್ನ ಜೊತೆಯ ರಾಯರಾಡಿದ ಮಾತಿಗೆ ಉತ್ತರರೂಪವಾಗಿ ಮಾತನಾಡುವನು.) ….ನೀವೀಗೇನ್‌ ಮಾತಾಡಿದಿರ ರಾಯರಽ ಬರಾಬ್ಬರೀ ನೋಡಿರಿ…! ನಾನೂ ನಿಮ್ಮ ಮತದಂವನಽ ಏನ್ರೆಪಾ! ಇಷ್ಟು ವಯಸ್ಸಾ...

ಹರಿಯೇ ಹೀಗಿರಲಿ ಎನ್ನ ಭಕ್ತಿ ಆ ಭಕ್ತಿಯಲಿ ಕಿಂಚಿತ್ತು ಸ್ವಾರ್ಥ ವಿರದಿರಲಿ ಸ್ವಾರ್ಥವೇನಾಂದರೂ ನನ್ನಿದಾಗಿದ್ದರೆ ಅದು ನಿನ್ನ ಪಡೆಯುವ ಹುನ್ನಾರವಿರಲಿ ಹರಿಯೇ ಹೀಗಿರಲಿ ಎನ್ನ ಭಕ್ತಿ ಮೀರಾ ನಿನಗಾಗಿ ಹುಚ್ಚಳಾದಂತಿರಲಿ ವಿಷವಾಕೆ ಅಮೃತದ ಸೇವಿಸಿದಂತ...

ಕರುಣೆ ತೋರು ನೀನೆನಗೆ ನನ್ನ ಬಾಳ ಏಳಿಗೆಗೆ | ದಾರಿದೀಪವಾಗೆನಗೆ ನನ್ನ ಬಾಳ ಈ ಹಾದಿಗೆ || ಗುರುನೀನೇ ಗುರಿತೋರಿಸು ನೀನೇ ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ| ಬದುಕ ಬವಣೆಯ ಬಿಡಿಸು ಬಾಳ ಮಹಿಮೆಯ ತಿಳಿಸು|| ಏಕೆ ಮತ್ತೆ ಮತ್ತೆ ಪುನರಪಿಸುವೆವೋ ಕಾಣೆ...

ಅವನೊಬ್ಬ ರಾಜಕೀಯ ಪುಢಾರಿ, ಮಂತ್ರಿಪದವಿಯಲ್ಲಿ ಸಂಪಾದಿಸಿದ ಕೋಟಿ ಕೋಟಿ ಹಣದ ಅಪಾರ ಸಂಪತ್ತು ಇತ್ತು. ಚಿನ್ನ, ಬೆಳ್ಳಿ, ಅಲ್ಲದೆ ತನ್ನದೇ ಆದ ಹೆಲಿಕ್ಯಾಪ್ಟರ್‌, ಸ್ವಂತ ವಿಮಾನ ಇಟ್ಟು ಕೊಂಡಿದ್ದ. ಅವನ ಹುಟ್ಟಿದ ಹಬ್ಬಕ್ಕೆ ಅತ್ಯಂತ ಬೆಲೆಬಾಳುವ ಚಪ್...

ಯಾರು ಕಟ್ಟಿದರೊ ಈ ಭವ್ಯ ದೇಗುಲ ಕೋಟಿ ಜನ ಹೊಗಳುವ ಈ ಕೋಟೆಕೊತ್ತಲ? || ಯಾವ ಚರಿತೆಯು ಬರೆಯಲಿಲ್ಲ ಶಿಲಾಶಾಸನ ಕೊರೆಯಲಿಲ್ಲ ತಾಳೆಗರಿಗಳು ಮಿಡಿಯಲಿಲ್ಲ ತಾಮ್ರಪಟಗಳು ಹೊಗಳಲಿಲ್ಲ || ಕಟ್ಟಿಸಿದಾತನು ಪಟ್ಟದ ಮೇಲೆ ಅಟ್ಟಹಾಸದಲಿ ಹೆಸರಾದ ಕಟ್ಟಿದ ಸಾವಿ...

ಭಾಗ-೧ ಒಬ್ಬ ಶ್ರೇಷ್ಠ ಕವಿಯಲ್ಲಿ ಅಲ್ಪ ಗುಣಗಳು ವಿರಳ. ಆತ ಗ್ರಹಿಸಿದ ಸಂಗತಿಗಳನ್ನು ಜಗತ್ತಿನ ಬದುಕಿನೊಂದಿಗೆ ಸಮೀಕರಿಸುವ, ವೈಭವೀಕರಿಸುವ ಆತನ ಅಂತಃಚಕ್ಷುವಿನಿಂದ ಆತನೊಬ್ಬ ಪ್ರವಾದಿಯಾಗಬಲ್ಲ. ಪರಿಪೂರ್ಣತೆಗೆ ಆತ ಸಾಕ್ಷಿ. ಉಳಿದವರ ತನ್ನಂತೆ ಪರಿ...

ಹಾಸಿಗೆ ಹಾಸಿದೆ ನೆಲದಾಗೆ ಅದು ಹಾಸದ ತಳವಿಲ್ಲ ಜಗದಾಗೆ || ಪ || ಹಸುಗೂಸು ಉರುಳಾಡಿ ಕೈಮೈಯಿ ತಿಕ್ಕಾಡಿ ಹೇಸಿಗೆ ಮಾಡಿದ್ದು ಹಾಸಿಗೆ ಹಸನಾಗಿ ಹಾಸಿದ್ದ ಗಸಬಸ ಕೆಡಿಸ್ಯಾಡಿ ರಸದಲ್ಲಿ ಉರುಳಿದ್ದು ಹಾಸಿಗೆ || ೧ || ಕಾಮದ ಕಲ್ಪನೆ ಏನೇನೂ ಇರದಾಗ ಮಾನ...

ಜನ ಜನ ನಮ್ಮ ಜನ ಕಾಳು ಕಡ್ಡಿ ತಿನ್ನುವ ಜನ ಹುಲ್ಲು ಮೇದು ಬರುವ ಜನ ಯಾವ ಕಸಾಯಿಖಾನೆಗೆ ಈ ಜನ ? ನಶ್ಶವ ತಿಣಿಕಿ ಎಡೆ ಎಡೆ ಹಣಿಕಿ ಏಕ್ಸಿ ಏಕ್ಸಿ ಎನ್ನುವರು ಎಡಬಲವೆನ್ನದೆ ಗಾಳಿಗೆ ಉಗಿದು ಬಯ್ಯುವರು ಬಯ್ಯಿಸಿಕೊಳ್ಳುವರು ಸಿಹಿ ಸಿಹಿ ಗುಲಾಬುಜಾಮೂನು...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...