ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ಕೆಲವು ಯಂತ್ರಗಳು ನೀರಿನಲ್ಲಿ ಚಲಿಸಿದರೆ, ಕೆಲವು ನೆಲದ ಮೇಲೆ ಮಾತ್ರ ಚಲಿಸುತ್ತವೆ. ನೀರಿನ ಒಳಗೂ ಚಲಿಸುವ ಸಬ್ಮೆರಿನ್‌ಗಳು ಸಹ ಇವೆ. ಆಕಾಶದಲ್ಲಿ ಅತ್ಯಂತ ವೇಗದಲಿ ಚಲಿಸುವ ಜೆಟ್‌ಗಳು ಇವೆ. ಇವು ಇಂದಿನ ಯುಗದಲ್ಲಿ ಮಾಮೂಲಿ ವಾಹನಗಳೆಂದು ಜನಹೇಳುತ್ತಾರೆ. ಆದರೆ ನೀರಿನಲ್ಲಿಯೂ ವೇಗವಾಗಿ ನೆಲದ ಮೇಲೂ ಓಡಬಲ್ಲ ಕಾರುಗಳನು ಇತ್ತೀಚೆಗೆ ನ್ಯೂಜಿಲೆಂಡ್ ಮೂಲದ “ಆಲನ್‌ಗಿಬ್ಸ್’, ಎಂಬ ವಿಜ್ಞಾನಿ ಕಂಡುಹಿಡಿದಿದ್ದಾರೆ. ಈತ ತನ್ನ ಶ್ರೀಮಂತಿಕೆಯ ಸ್ವಸಾಮರ್ಥ್ಯದಿಂದ ಈ ಸಾಧನೆ ಮಾಡಿದರು. ಇವರು ಕಂಡು ಹಿಡಿದ ಕಾರು ನೆಲದ ಮೇಲೆ ೧೬೦ ಕಿ.ಮೀ. ಚಲಿಸಿದರೆ ನೀರಿನ ಮೇಲೂ ಗಂಟೆಗೆ ೪೮ ಕಿ.ಮೀ. ಓಡುತ್ತದೆ. ೧೭೫ ಅಶ್ವಶಕ್ತಿಯ ೨.೫ ಲೀಟರ್ ವಿ೬ ಇಂಜನ್ ಈ ಕಾರಿನೊಳಗಿದೆ. ನೆಲದ ಮೇಲೆ ಸಾಮಾನ್ಯ ವಿಧಾನದಲ್ಲಿ ಓಡುವ ಇದಕ್ಕೆ ಜೆಟ್ ವ್ಯವಸ್ಥೆಯನ್ನು ಬಳಸಲಾಗಿದೆ. ಈ ವ್ಯವಸ್ಥೆಯಿಂದ ನೀರನ್ನು ಒಳಕ್ಕೆ ಎಳೆದುಕೊಂಡು ಸು. ಒಂದು ಟನ್ನಷ್ಟು ಒತ್ತಡದಲ್ಲಿ ಹಿಂದಕ್ಕೆ ಹೊರಹಾಕಲಾಗುತ್ತದೆ ಈ ಒತ್ತಡವು ವೇಗದ ಚಲನೆಗೆ ಅನುಕೂಲಮಾಡಿಕೊಡುತ್ತದೆ.

ಈ ಕಾರಿನ ನಿರ್ಮಾತೃ ಗಿಬ್ಸ್ ವಾಸಿಸುತ್ತಿದ್ದ ಸಮುದ್ರದ ಬದಿಯಲ್ಲಿರುವ ತನ್ನ ಬಂಗ್ಲೆಯಲ್ಲಿದ್ದಾಗ ಅಲ್ಲಿ ಬಳಸಲೆಂದೇ ಇಂಥಹ ಲಾಭಯದಾಯಕ ವಾಹನವೊಂದನ್ನು ರೂಪಿಸಿದ. ನಂತರ ಬ್ರಿಟನ್ನಲ್ಲೊಂದು ಕಾರ್ಖಾನೆಯನ್ನು ಸ್ಥಾಪಿಸಿದ. ಜಾಗ್ವರ್, ರೋಲ್ಸ್‌ರಾಯ್ ನಂತಹ ಸಂಸ್ಥೆಗಳಲ್ಲಿದ್ದ ಇಂಜನೀಯರ್ ನೀಲ್ ಜೆಂಕಿನ್ಸರನ್ನು ಜೊತೆಗೂಡಿಸಿಕೊಂಡ. ಸತತ ಪರಿಶ್ರಮದೊಂದಿಗೆ ಈ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದ.

‘ಅಕ್ವಡಾ’ ವನ್ನು ತಯಾರಿಸಿದ. ನಮ್ಮಲ್ಲಿರುವ ಲಕ್ಷಲಕ್ಷಗಳಿಗೆ ಸೀಮಿತಗೊಳ್ಳದ ಈ ಕಾರಿನ ಬೆಲೆ ಶ್ರೀಮಂತರಿಗೂ ಎಟುಕದಂತಾಗಿದೆ. ಅಂದ ಹಾಗೆ ಇದರ ಬೆಲೆ ೨,೩೦,೦೦೦ ಡಾಲರ್! ಅಂದರೆ ಭಾರತೀಯ ಬೆಲೆ ೧,೦೫,೮೦,೦೦೦ ಮಾತ್ರ. ಹಾಗೆ ನೋಡಿದರೆ ಈ ಕಾರಿನ ಬೆಲೆ ಕಡಿಮೆಯೆ. ಜರ್ಮನಿ ಮೂಲದ ಡೈಮ್ಲರ್ ಕ್ರೈಸ್ಲರ್ ಕಾರು ತಯಾರಿಕಾ ಕಂಪನಿಯು ಸಿದಪಡಿಸಿದ ‘ಮೇ ಬ್ಯಾಚ್,’ ಎಂಬ ಕಾರಿನ ಬೆಲೆ ೫ ಕೋಟಿಗಳಂತೆ! ಸದ್ಯಕ್ಕೆ ಈ ಭೂಮಂಡಲದ ಮೇಲಿರುವ ಐಶಾರಾಮಿ ಕಾರು ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರ್ವರೊಳಿತಿರುವ ಹಳ್ಳಿಪರ ಹೋರಾಡುವನಿವಾರ್‍ಯತೆಗೇನೆನ್ನುವುದು?
Next post ಹೆಣ್ಣಿರದ ಬಾಳು ಬಾಳೇ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys