ಹೆಣ್ಣಿರದ ಬಾಳು ಬಾಳೇ

ಹೆಣ್ಣಿರದ ಬಾಳು ಬಾಳೇ
ಬಣಗುಡುತ್ತಿದೆ ಬದುಕು
ಬೆಳಕು, ಬಿನ್ನಾಣ, ಶೃಂಗಾರವಿಲ್ಲದಲೆ|
ಒಂಟಿತನದಲಿ ಅದೇನು ಸುಖವಿದೆಯೋ ಕಾಣೆ!
ಗಂಡಿನ ಈ ಒಣ ಹರಟೆಗೆಲ್ಲಿದೆ ಮಾನ್ಯತೆಯು||

ಹೆಣ್ಣಿರದ ಮನೆಯು
ದೀಪವಿಲ್ಲದ ಗುಡಿಯಂತೆ,
ಗೃಹಿಣಿ ಇಲ್ಲದ ಮನೆಯು
ಕಳಸವಿಲ್ಲದ ಗೋಪುರದಂತೆ,
ಹೆಣ್ಣಿರದ ಬಾಳು
ಕೈಗಳಿಲ್ಲದ ಗಡಿಯಾರ ನಡೆದಂತೆ||

ಒಲಿದ ಹೆಣ್ಣಿನ ಚೆಲುವು ಒಲವ
ಸಂಗ ಸಹವಾಸವಿಲ್ಲದಲೆ
ಸಂಸಾರ ಜರಿಯುವುದು ತರವಲ್ಲ|
ಅವಳೊಲವ ಸವಿ ಜೇನ
ಸಿಹಿ ಮಧುವ ಸವಿಯದಲೇ
ದೂರುವುದು ಸರಿಯಲ್ಲ|
ಹೆಣ್ಣಿನ ಸಹನೆ ಸುಗುಣ
ಸಂಯಮಶೀಲತೆಗೆ ಮಿತಿಯಿಲ್ಲ
ಹೆಣ್ಣು ಸಂಸಾರದ
ಕಣ್ಣೆಂದರು ತಿಳಿದವರು|
ಸಾಕು ಈ ಬ್ರಹ್ಮಚಾರಿಯ ನಾಟಕೀಯತೆ
ಕೈತುಂಬಾ ದುಡಿದು ಸಂಸಾರ ರಥ ಸೇರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!
Next post ತವರಿನ ಜನ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…