ಅರ್ಜುನನ ಪಾಡಿಂದೆನಗೆನ್ನ ಕೃಷಿಯ
ಪರ ಬರೆವೀ ಹೊತ್ತಿನಲಿ, ಶಲ್ಯ, ಭೀಷ್ಮ, ದ್ರೋ
ಣರಂಥವರೆಷ್ಟೊಂದು ಸಜ್ಜನ ಬಂಧುಗಳೆನ್ನ
ವರಿಂದು ಪೇಟೆಯ ಪಕ್ಷದೊಳಿರುತಿಹರು
ಪರಿಸರದ ಪರವಿತ್ತ ಕೃಷಿಗೆ ಬರಲೆಡೆ ಕಾಣದವರು – ವಿಜ್ಞಾನೇಶ್ವರಾ
*****