
ಅಡಿಕೆ ಸುಲಿಯುವುದು ಅತ್ಯಂತ ಕಷ್ಟಕರ ಕೆಲಸ. ಒಂದೇ ಗೊನೆಯಲ್ಲಿ ನಾನಾ ಬಗೆಯ ಅವಸ್ಥೆಯ ಅಡಿಕೆಗಳಿರುತ್ತವೆ. ಇವುಗಳನ್ನೆಲ್ಲ ಒಂದೊಂದಾಗಿ ಬಿಡಿಸಿ ಕಾಯಿಯಾದುದ್ದನ್ನು ಅಯ್ಕೆ ಮಾಡಿ ಸುಲಿಯುವುದಕ್ಕೆ ಸಮಯ ಹಿಡಿಯುತ್ತದೆ. ಮತ್ತು ಕೈ ಬೆರಳುಗಳಿಗೆ ಗಾಯವಾ...
ಕಾಡಿನೊಳೆಲ್ಲ ಕೂಡಿ ಬೆಳೆವಂತೆ ಬೆಳೆದೆಮ್ಮ ತೋಟದೊ ಳಡಗಿರ್‍ಪ ಅಲಫಲವನಾಯ್ಕೆಯೊಳು ಸಂಸ್ಕರಿಸಿ ತುಂ ಬಿಡುವಂತೆ ತುಂಬಿಹೆನಿಲ್ಲಿ ಬಿಡಿ ಬಿಡಿ ಕವನದಲಿ ಎ ನ್ನಡುಗೆಯನುಭವವಾ, ನೋಡಿದೊಡಾಕರ್ಷಿಸುವ ಕಡು ಪ್ಯಾಕಿಂಗ್ ಸೀಲಿಂಗ್ ಇಲ್ಲವೆಂದವಗಣಿಸದಿರಿ R...
ಓ ಶಿವೆಯೇ ! ಮಲ್ಲಿಗೆ ಹೂ ಬನದ ನಿವಾಸಿಯೇ… ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ ಹೂಪಾದ ಮುದ್ರೆಯನೊತ್ತುತ್ತ ಬಾರೆ. ನಿನ್ನ ದರ್ಶಿಸುವ ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ ಯುಗಾದಿ ಹಬ್ಬದ ಚಿಗುರು ಚಿಗುರು ಮಾವು, ಬೇವು ಹೊಂಗೆ ತರುಗಳ ಕುಂದದ ...
ವರ್ಷಕಾಲವಾಗಿತ್ತು. ಹಗಲಿರುಳು ಬಿಡದೆ ಸುರಿವ ಮಳೆಯಿಂದ ವೀರಪುರವು ಚಳಿಕಟ್ಟಿ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿಂತುಹೋದುದರಿಂದ, ವ್ಯಾಪಾರವೆಲ್ಲಾ ಸ್ತಬ್ಧವಾಗಿತ್ತು. ವ್ಯಾಪಾರ...
ಗಂಡು ಮಗುವೇ ಬೇಕೆಂದು ಮರಳಿ ಯತ್ನವ ಮಾಡಿ ಮಾಡಿ ಮಕ್ಕಳಾದವು ಹನ್ನೆರಡು ಹನ್ನೊಂದು ಹೆಣ್ಣು ಕೊನೆಗೊಂದು ಗಂಡು *****...
ಹೂವಿನ ದಳಗಳಂತೆ ಕಣ್ಣುಗಳನ್ನು ತೆರೆದು ಸುಗಂಧ ಜಲವ ಬೀಸಿ ಸೆಳೆದಾಗ ಬಂತು ದುಂಬಿ ದೇವ ಮೈದುಂಬಿ ಬಂದಂತೆ ಹೀರಿ ಹನಿ ಮಕರಂದ ಊರಿ ಹೂ ಮೈಯೊಳಗೆ ಹುದುಗಿ ಹಗುರಾಗಿ ಎದೆಯ ಮೇಲೊರಗೆ ಅಂದೆ: ನೀನೀಗ ನನ್ನ ಕರುಣೆಯ ಕಂದ ನಿನ್ನೊಳಗೆ ನನ್ನ ರೂಪ ಸ್ಪರ್ಶ ರಸ...
ಮೇ ಒಂದನೇ ತಾರೀಕು ಬಂತೆಂದರೆ ಇಂಡಿಯಾದ ಕೆಲವು ನಗರಗಳಲ್ಲಾದರೂ ಕೆಂಪು ಬಾವುಟಗಳು ಉತ್ಸಾಹದಿಂದ ಮಾತನಾಡುತ್ತವೆ. ವ್ಯವಸ್ಥೆ ವಿರೋಧಿ ವಿವೇಕವನ್ನು ಉತ್ಸಾಹವಾಗಿ ಪರಿವರ್ತಿಸಿ ಪ್ರಚಂಡ ಮೆರವಣಿಗೆಯಲ್ಲಿ ಪ್ರತಿಫಲಿಸುತ್ತವೆ. ಆದರೆ ಕೆಂಪು ಬಾವುಟವನ್ನು...
ನವಿಲುಗರಿ ತೊಟ್ಟ ಹಸ್ತದ ಮೋಹನಾಂಗನ ಕಂಡಾಗಲೆಲ್ಲಾ ನನಗೋ ನವಿಲಾಗುವ ಬಯಕೆ ಕುಣಿವ ಮನದ ತಹಬದಿಯ ತಂತು ಅದೇಕೋ ಬಿದಿರು ಕೋಲಿಗೆ ದಕ್ಕಿದ್ದು. ಹುಸಿಭರವಸೆಗಳ ಕಪಟಮಾತುಗಳೊಡಯ ಅದೆಷ್ಟು ನಂಬುವೆ ನಾನು ನಿನ್ನ. ಯಮುನೆ ತಟದ ಜುಳುಜುಳು ಗಾನದ ಹೊರತಾಗಿಯೂ ...
ಅದು ಪ್ರೀತಿಯಲ್ಲ ಸಲುಗೆಯೂ ಅಲ್ಲ ಆದರೂ ಅವಳು ಅವನನ್ನು ಆರಾಧಿಸುತ್ತಾಳೆ; ಹೆಸರಿಡದ ಸಂಬಂಧದ ಹುಡುಕಾಟದಲ್ಲಿ… *****...
ಪಂಚೇಂದ್ರಿಯಗಳು ನಮಗೆ ಒದಗಿಸುವ ಸಂವೇದನೆಗಳಲ್ಲಿ ಕಲೆಗೆ ಮಾಧ್ಯಮವಾಗಿ ಉಪಯೋಗವಾಗುವುದು ಕೇವಲ ಎರಡೇ ಎನ್ನುತ್ತಾನೆ ಹೆಗೆಲ್: ದೃಶ್ಯ (ದೃಷ್ಟಿ) ಮತ್ತು ಧ್ವನಿ (ಶ್ರವಣ). ಯಾಕೆಂದರೆ ಇವುಗಳಿಂದ ನಾವು ಕಲಾಭಿವ್ಯಕ್ತಿಗೆ ಅಗತ್ಯವಾದ ಸುದೂರವನ್ನು ಗಳಿಸ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

















