ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****
ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****