ಗಕ್ಕೆಂದು ನಿಂತೆ ಒಂದು ಚಣ
ಶುರುವಾಯಿತು ಅನುಮಾನ

ಅವತ್ತು ಇಡೀ ದಿನ
ಬೆಕ್ಕಿನದೇ ಧ್ಯಾನ

ಮೀನು ಮಾರುವವಳಿಗೆ
ಮಾಯೆ ಕವಿದಿರಲು

ಒಣ ಮೀನಿಗೂ
ಜೀವ ಬಂದಿರಲು

ಘಮ ಘಮಿಸಿ ಅದು
ಲೋಕವನೆ ಸೆಳೆದಿರಲು

ಪರಿಮಳದ ಪರಿಣಾಮ
ಮೂಗರಳಿಸಿ ಬೆಕ್ಕು
ಅಡ್ಡ ಹೋಯಿತು.
*****