
ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ ಹಾಸಿಗಿ ಹಾಸಾಕ ನಿಂತೇನ ||ಪಲ್ಲ|| ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ ಮಖಮಲ್ಲು ಹಾಸೀಗಿ ಮಾಡ್ತೇನ ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ ಬೆಚ್ಚಂಗ ಕುತನೀಯ ಹಾಕ್ತೇನ ||೧|| ದೇವರಾ ಹೆಸರಾಗ ದೇವಕಿ ಬಸರಾದ್ರ ಬಾಣೆಯ...
ಅವನು ಮಣ್ಣಿನ ಗಡಿಗೆಗಳನ್ನು ಮಾಡುತಿದ್ದ.ಯೌವ್ವನದ ಭಾವನೆಗಳಿಂದ ತುಂಬಿ ತುಳುಕುತ್ತಿದ್ದ ಅವನು ಮಣ್ಣಿನ ಗಡಿಗೆಯ ಕಂಠದ ಕೆಳಗೆ ಹೃದಯಾಕಾರ ಮಾಡಿ ಸಿಂಗರಿಸಿದ. ಅದನ್ನು ತಾನು ಪ್ರೀತಿಸಿದ ಹಳ್ಳಿಯ ಹುಡುಗಿಗೆ ಕೊಟ್ಟ ಇವನ ಪ್ರೀತಿ ಅರ್ಥವಾಗದ ಅವಳು ಅದನ...
ರೊಟ್ಟಿ ಹಸಿವಿನ ನಡುವೆ ಒಂದು ನಿಗೂಢ ಕಾಲುವೆ. ಗುಪ್ತಗಾಮಿನಿಯೊಡಲಲ್ಲಿ ಹಾಗೇ ಸುಪ್ತವಾಗಿದೆ ಖಾಸಗಿ ಕ್ಷಣಗಳು. ಅವರು ಸಾಕ್ಷಿ ಕೇಳುತ್ತಾರೆ ರೊಟ್ಟಿ ಹಸಿವು ಒಳಗೇ ನಗುತ್ತವೆ. *****...
ಭಕ್ತನು ನಾನೇ? ನಿನ್ನಂತರಗವ ಅರಿಯದ| ಭಕ್ತನೆಂಬ ಪಟ್ಟ ಬಿರುದುಗಳ ಬಾಚಿಕೊಳ್ಳುವ ಆತುರ, ಬರದಲ್ಲಿರುವ ಆಡಂಬರದಾ ಭಕ್ತನು ನಾನೇ|| ಮೈಮೇಲೆ ರೇಷಮಿ ವಸ್ತ್ರಾ ಕೈತುಂಬಾ ವಜ್ರಾದಾಭರಣ| ಕತ್ತಲಿ ಹೊಳೆಯುವ ಮುತ್ತು ರತ್ನ ಕನಕಾದಿಗಳ ಸರಮಾಲೆ| ಬೆಳ್ಳಿಯ ಜನ...
PCN ಎಂಬ ತಂತ್ರಜ್ಞಾನದ ಮೈಕ್ರೋ ಸೆಲ್ಯೂಲರ್ ಫೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಮೈಕ್ರೋಸೆಲ್ಯುಲರ್ ತಂತ್ರಜ್ಞಾನದಲ್ಲಿ ಇಡೀ ಭೂಮಿಯನ್ನು ಅತಿ ಸಣ್ಣಭಾಗಗಳಾಗಿ ಮಾಡಿ ಒಂದೊಂದು ಭಾಗವನ್ನು ಮೈಕ್ರೋಸೆಲ್ ಎಂದು ಕರೆಯುತ್...
ಬೆವರಿಸುವ ಬಿಸಿಲು ಬೆದರಿಸುವ ಸಿಡಿಲು ಬಯಸದೆಯೆ ಬಂದೆರಗುವವಘಡವು ಬದುಕಿನೆಮ್ಮಯ ಬಯಕೆಗಳನಲ್ಲಲ್ಲಲ್ಲೇ ಬಿಡದೆ ಕೊಡುತಿರ್ಪ ಪ್ರಕೃತಿಯೊಳಿರುತಿರಲು ಬಡವನದನುಂಡೆನ್ನ ಮಾತನೆಲ್ಲರೊಪ್ಪುವುದೆಂತು ? – ವಿಜ್ಞಾನೇಶ್ವರಾ *****...
ನಮ್ಮೂರಲ್ಲಿ ಹುಡುಕಬೇಕಾಗಿಲ್ಲ ಕಣ್ಣು ಹೊರಳಿಸಿದಲ್ಲಿ ನಾನಾ ಗಾತ್ರ, ಗೋತ್ರದ ಹಂದಿಗಳು. ಅಸಹ್ಯವೆಂಬುದಿಲ್ಲ ಕಸ ರಸದ ಬೇಧವಿಲ್ಲ ಹುಡುಕಿ ಹೋಗಿ ತಿನ್ನುತ್ತವೆ. ಕೊಚ್ಚೆ, ಚರಂಡಿ ಈಜುಕೊಳ ಮಾಡಿ ಮನಸ್ವಿ ಉರುಳಾಡಿ, ಹೊರಳಾಡಿ ಕೆಟ್ಟದ್ದ ಗಟ್ಟಿಯಾಗಿ ಮ...
ಮನೆ ಮಗಳು “ಸೋನಿ” ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು. ದಕ್ಷಿಣ ಕನ್ನಡದವರು ‘ಬಸುರಿ ಊಟ’, ಉತ್ತರ ಕರ್ನಾಟಕದವರ ‘ಉಡಿ ತುಂಬ...
ಗಂಡಂದಿರು ಹೆಂಡತಿಯರಿಗೆ ಹೊಡೆಯುವುದು ಸಹಜ ಹೊಡೆಸಿಕೊಳ್ಳದ ಗಂಡಂದಿರು ಜಗತ್ತಿನಲ್ಲಿ ಇಲ್ಲವೇ ಇಲ್ಲ ಅಕ್ಷರಶಃ ನಿಜ *****...
ಸಂಭ್ರಮವಿಲ್ಲ, ಸಡಗರವಿಲ್ಲ ಮನೆಯೊಳಗೆ ಸೂತಕದ ವಾತಾವರಣ ಆಶೆಯಂತೆಯೆ ಬತ್ತಿ ಹೋಗಿದೆ ಎದೆ ಹಾಲು ಹಡೆದವ್ವ ಕೊರಗುವಳು ಜೋಲಿ ಏರಿಸಲು ಮೊಳೆಯೆ ಸಿಗಲೊಲ್ಲದು ಅಪ್ಪ ಗೊಣಗುವನು ಪೇಟೆಯಲ್ಲಿ ಮಿಠಾಯಿ ಇದ್ದಕ್ಕಿದ್ದ ಹಾಗೆಯೆ ತುಟ್ಟಿಯಾಗಿದೆ ಚಂದ ಮಾಡಿ ಪದ ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















