
ಎಷ್ಟು ಸವರಿದರೂ ಮತ್ತೆ ಮತ್ತೆ ಮುಟ್ಟಬೇಕೆನ್ನಿಸುವ ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ ಅಕ್ಷರಗಳು ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ. ಆತನ ತುಟಿಗಳ ಮೇಲೆ ಬೆರಳಾಡಿಸಿದಾಗೆಲ್ಲ ಅನೂಹ್ಯವಾದ ಬೆಸುಗೆ ಕರುಳ ಕೊಂಡಿಯಂತೆ ಒಳಗೊಳಗೆ ಬಲಿಯುತ...
ಇರುಳ ಹೊಲದ ಮೇಲೆ ಬೆಳಕಿನ ಬಿತ್ತನೆ ನಡೆಯುತ್ತಿದೆ… ಅವಳು ದೀಪ ಹಿಡಿದು ಬದುವಿನಲ್ಲಿ ನಿಂತಿದ್ದಾಳೆ *****...
ನನ್ನ ಗೆಳೆಯನೊಬ್ಬ ಸೈನ್ಯಕ್ಕೆ ಸೇರಿದ. ಆತ ಯುದ್ಧದ ಬಗ್ಗೆ ಹೇಳುತ್ತಿದ್ದ ವಿವರಗಳು ನಿಜಕ್ಕೂ ಕುತೂಹಲಕಾರಿ ಯಾಗಿದ್ದವು; ಅಷ್ಟೇ ಅಲ್ಲ. ಆತಂಕಕಾರಿಯೂ ಆಗಿದ್ದವು. ನಾವು ಸಾಮಾನ್ಯವಾಗಿ ನಮ್ಮ ಸೈನ್ಯದ ಬಗ್ಗೆ ಎಲ್ಲಿಲ್ಲದ ಅಕ್ಕರೆ, ಅಭಿಮಾನ ಹೊಂದಿರುತ...
ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ ನಿಂತಿತ್ತು,...
ನೀ ಬರುವ ದಾರಿಯಲಿ ನಿನ್ನ ನೆನಪುಗಳೇ ಸುಳಿದಾಡೋ ಗಾಳಿಯಲಿ ತಂಪೆರೆವ ಹನಿಗಳೇ || ಮನದ ಕೂಗು ಕೇಳದೆ ಮನದಿಂದ ಹಾಡುವ ತುಡಿತದ ನೋವುಗಳೇ ಎನ್ನ ಕಾಡುವ ದನಿಗಳೇ || ಕಲ್ಲು ಮನಸ್ಸು ನಿನ್ನದು ಕರಗದು ನಿನ್ನ ಮನವು ಮರುಗದು ನಾ ನಿನಗೆ ಮನವ ನೀಡಿ ಸೋತು ಹೋ...
ರಾತ್ರಿಯೂಟ ಮುಗಿಸಿ ಎಲೆಯಡಿಕೆ ಮೆಲ್ಲುತ್ತ ಸುದ್ದಿ ಪತ್ರಿಕೆ ವಿವರ ಓದುತ್ತ ಕೂತಿದ್ದೆ, ಅರ್ಧ ಮುಗಿಸಿಟ್ಟಿದ್ದ ಖುರಾನು ಮೇಜಿನ ಮೇಲೆ, ನಾನೊಬ್ಬನೇ ಇಲ್ಲ ರೂಮಲ್ಲಿ ಇನ್ಯಾರೋ ಇದ್ದಾರೆ ಅನ್ನಿಸಿತು. ನೆರಳು ನೆರಳಾಗಿ ಎದುರಿದ್ದ ಕುರ್ಚಿಯ ಮೇಲೆ ಯಾರ...
ಒಂಟಿ ಬಾಳು ಎಡವಟ್ಟು, ಮುಗ್ಗಟ್ಟು; ಜೋಡಿಬಾಳು (ಬಿ) ಬಿಕ್ಕಟ್ಟು ಮತ್ತು (ಇ) ಇಕ್ಕಟ್ಟು! *****...
ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ ನಡೆದರು ಮುಗಿಯದ ಕಾಡಿನ ಹಾದಿ ಕಾಣಿಸಿತೊಂದು ಗುಡಿಸಲ ಬಿಡದಿ ಮೀಯಲು ಬೆಚ್ಚನೆ ಬಿಸಿ ನೀರಿತ್ತು ಕುಡಿಯಲು ಪನ್ನೀರಿನ ಷರಬತ್ತು ಒಲೆಯ ಮೇಲೊಂದು ಮಾಯಾ ಗಡಿಗೆ ಬಯಸಿದ ತಕ್ಷಣ ಪಾಯಸ...
ಧರ್ಮಭೂಮಿ ಎನಿಸಿಕೊಂಡಿರುವ ಭಾರತದ ಇತಿಹಾಸದುದ್ದಕ್ಕೂ ಸಾಧುಸಂತರು, ಭಕ್ತಶ್ರೇಷ್ಠರು, ವೇದಾಂತಿಗಳು, ಮಹಾತ್ಮರೂ ಜನ್ಮತಾಳಿ ತಮ್ಮ ತತ್ವಜ್ಞಾನವನ್ನು ಜನತೆಗೆ ನೀಡಿದ್ದಾರೆ. ಅಂತಹ ಭಕ್ತರಲ್ಲಿ ತಮಿಳುನಾಡಿನ ಭಕ್ತಪರಂಪರೆಯಲ್ಲಿ ಅಗ್ರಗಣ್ಯರಾದ ಹನ್ನೆರ...
ತಿಮ್ಮ ತನ್ನ ನಾಯಿ ಜೊತೆ ವಾಕಿಂಗ್ ಹೊರಟಿದ್ದ – ಅವನ ಗೆಳೆಯ ಸಿಕ್ಕವನು ಕೇಳಿದ – “ಏನು ಕತ್ತೆಯ ಜೊತೆಯಲ್ಲಿ ವಾಕಿಂಗ್ ಹೊರಟಿರುವೆ…” ಅದಕ್ಕೆ ತಿಮ್ಮ ಕೇಳಿದ – “ಏನೋ ಇದು ನಾಯಿ ಅಲ್ವಾ?” ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...














