ಕಡಲಿನಾವಿಯನೆತ್ತಿ ತಿರೆಗದನು ಮರೆಮಾಡಿ ಮುಗಿಲ ಮೇಲೆಯೆ ಬೆಳಗುವಿನತೇಜದಂತೆ ಭವಕವಿದ ದುರ್ದಿನದೊಳದರ ಮೇಲಾಡುತಿಹ ರಸದ ತೇಜಕೆ ಜೀವ ಹಂಬಲಿಪುದಿಂತೆ. ಆ ಮುಗಿಲ ಬಿಡಿಸುತಾ ಕಿರಣಗಳಿಗೆಳೆಸೋ೦ಕ ತಂದು ಕತ್ತಲ ಕಳೆವ ಶುಭಕಲ್ಪಗಳನು ಸುಂದರಾಗಮಕಲಿತ ದೇವೋತ್ಸವಂಗಳನು ಸರಸಸಜ್ಜನಗೋಷ್ಠಿ ಸಲ್ಲಾಪಗಳನು ಆದರಿಸದೀ ನೆಲದ ಮನದ...

ನನ್ನ ಪ್ರೇಮದ ಕಡ ಎಷ್ಟು ದಿನ ಇಟ್ಟುಕೊಳ್ಳುವಿ ನೀ ಬಿದಿರಕೋಲಿನ ಸಖನೇ ನಾಳೆಗಾದರೂ ತೀರಿಸಿಬಿಡು ಹನಿಮುತ್ತಿದ ಕೆಂದಾವರೆಗಳು ನನ್ನ ತುಟಿಯಲ್ಲರಳಲಿ. ಬಿದಿರುಗಣೆ ಉಲಿತ ಸದ್ದಾಗದಂತೆ ನನ್ನಾತ್ಮವನ್ನೆ ಕಬಳಿಸುತ್ತಿದೆ. ಯಮುನೆ ತೀರದ ಕುಳಿರ್‍ಗಾಳಿ ತಣ...

ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕವಾಗಿ ಬಯಸುವುದೇನು? ಸುಖ, ಶಾಂತಿ, ಶ್ರೀಮಂತಿಕೆ, ಆರೋಗ್ಯ? ಊಹೂಂ, ಇವೆಲ್ಲಾ ಸಿಕ್ಕಿಯೂ ಮನ್ನಣೆಯೊಂದು ಸಿಗದಿದ್ದರೆ ವ್ಯರ್ಥವೇ ಸರಿ. ರಾಜಕೀಯವಾಗಿ ಪ್ರಜಾಪ್ರಭುತ್ವ ಎಲ್ಲೆಡೆ ಬಂದು ಸಮಾನತೆ ನೆಲಸಿದ ಮೇಲೂ ವ್ಯಕ್ತ...

ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht...

ಕಳ್ಳ ನೋಟ ಬೀರಿ ಎನ್ನ ಮನವ ಕದ್ದವ ಎಲ್ಲಿಹ ಹೇಳೆ! ಸಖಿ || ಇರುಳು ಮರಳಿತು ಚಂದ್ರಮ ಬಂದನು ನೀನೇ ಪುಣ್ಯವತಿ ಚಕೋರಿ || ಚಂದ್ರಮ ನಿನಗಾಗಿ ಪ್ರೀತಿ ಬೆಳದಿಂಗಳಾಗಿ ಮುತ್ತನಿತ್ತನೇ ನೀನೇ ಪುಣ್ಯವತಿ || ವಿರಹದ ಬೇಗೆಯಲಿ ರಾಧೆ ನಾ ಒಂಟಿಯಾದೆ ಶ್ಯಾಮ ಬ...

ಈಚೆಗೆ ಯಾಕೋ ತುಂಬ ಸಣ್ಣಗಾಗಿದ್ದೀರಿ ಅಂತ ಗೆಳೆಯರು ಪರಿಚಿತರೆಲ್ಲ ಹೇಳಲು ಶುರುಮಾಡಿದರು. ನನಗೇನಾಗಿದೆ ಧಾಡಿ ಧಾಂಡಿಗನಂತಿದ್ದೀನಿ – ಆಂತಾ ದಿನಾ ಹೇಳಿ ಹೇಳಿ ಬಾಯಿ ಒಣಗಿ ಹೋಯಿತು. ಮೊನ್ನೆ ಇವಳೂ ಒಮ್ಮೆ ಮೆಲ್ಲಗೆ ಹತ್ತಿರ ಬಂದು “ಯಾ...

ಇದು ಬುದ್ಧ ಪೂರ್ಣಮಿ ಇದು ಶುದ್ಧ ಪೂರ್ಣಮಿ ಎಲ್ಲ ಪೂರ್ಣಮಿಯಂತಲ್ಲ ಜಗವೆ ತೊಯ್ಪದಲ್ಲ! ಎಲ್ಲರ ಕಣ್ಗಳ ತೆರೆಸಿ ಲೋಕದ ಮಾಯೆಯ ಹರಿಸಿ ಬುದ್ಧ ಜನಿಸಿದಂದು ವೈಶಾಖ ಪೂರ್ಣಮಿಯಿಂದು ಜನ್ಮಾಂತರದಿಂದೆದ್ದ ದುಃಖದ ಮೂಲವ ಗೆದ್ದ ಬುದ್ಧ ಜನಿಸಿದಂದು ವೈಶಾಖ ಪೂ...

ನನ್ನ ಮಗಳು ರೇಖಾ ನನಗೆ ಅಚ್ಚುಮೆಚ್ಚು. ಒಬ್ಬಳೇ ಮಗಳೆಂದೋ ಏನೋ ಯಾವಾಗಲೂ ಅವಳು ನನ್ನ ಕಣ್ಮುಂದೆ ಸುಳಿಯುತ್ತಿರಬೇಕೆಂದು ಅನ್ನಿಸುತ್ತದೆ. ಸ್ವಲ್ಪ ಕೆಮ್ಮಿದರೂ ಸಾಕು ನನ್ನ ಗಂಟಲೇ ತುಂಬಿ ಬಂದಂತಾಗುತ್ತದೆ. ಅತ್ತಾಗ ಅವಳ ಕಣ್ಣಿನಿಂದ ನೀರು ಬರುವುದಿಲ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...