ಅಂದು ಬೆಳಗಿನ ಊಟಕ್ಕೆ ಕುಳಿತ ಗುರುಗಳು ಕೇಳಿದರು. ‘ಇಂದು ಅನ್ನ ಮಾಡಿದವರಾರು?’ “ನಾನು” ಎಂದ ಶಿಷ್ಯ. ‘ಬರಿ ನೀನು ಇರಲು ಅನ್ನವಾಯಿತೇ?’ ‘ಇಲ್ಲ ಅಕ್ಕಿ ಬೇಕೇ ಬೇಕು’ ‘ಬರಿ ಅಕ್ಕಿ ಇರಲು ಅನ್ನವಾಯಿತೇ?’ ‘ಇಲ್ಲ ಗುರುಗಳೇ! ನೀರು ಬೇಕಾಯಿತು!’ ‘ಅಕ್ಕಿ, ನೀರು ಇರುವಾಗ, ಅನ್ನವಾಯಿತೇ?’ ‘ಇಲ್ಲ ಗುರ...

ಭೂಗೋಳದ ತುಂಬ ಕಣ್ಣಾಡಿಸಿ ನೋಡಿದೆ- ನನ್ನ ಸುಂದರ ಕಾಶ್ಮೀರ ಕಾಣುತ್ತಲೇ ಇಲ್ಲ, ಎಲ್ಲಿದೆ ಅ ನಿಸರ್ಗದ ಬೀಡು- ಪ್ರವಾಸಿಗರ ಸ್ವರ್ಗದ ನೆಲೆವೀಡು, ಸುಂದರವಾದ ‘ದಲೆ’ ಸರೋವರದ ತಿಳಿ ನೀರನು ಕೆಂಪಾಗಿಸಿದ ವ್ಯವಸ್ಥೆಯ ವಕ್ತಾರರೇ ತೋರಿಸಿ ಕೊಡಿ ನನ್ನ ಹೂವ...

ಸಾವಯವವೆಂದರದು ಗೃಹಸ್ಥನಾಗುವುದೆಂದೆ ಸಂತೆಯೊಳಗಿಂದೇನೆ ತಂದರು ಕುಂದೆ ಸ್ವಗೃಹದ ಸುತ್ತಿನೊಳೆಲ್ಲ ಸೊತ್ತನು ಸಾನುರಾಗದಿ ಸಾಗುವಳಿಗೊಂಡೊಡಾತಂಗೆ ಸದೃಹಸ್ಥನೆಂದೆಂಬ ಶುಭನಾಮ ಸಲ್ಲುವುದು – ವಿಜ್ಞಾನೇಶ್ವರಾ *****...

ಬಂತು ಶ್ರಾವಣ ಎಂತು ಬದುಕುವಳೊ ನಲ್ಲೆ ಜೀವ ಉಳಿಸಿ ಎಂದು ಹಪಹಪಿಸಿ ಮೈಗೆ ಮನಸ್ಸಿಗೆ ಯಾತನೆಯ ಬರಿಸಿ ಬರಿದೆ ಕೊರಗದಿರು, ಸೊರಗದಿರು ನಲ್ಲ ತುಂತುರು ಮಳೆಯ ತುಷಾರಕ್ಕೆ ತಂಗಾಳಿಯ ಅಲೆ ಬಂದು ಸಿಲುಕಿದಾಗ ನನ್ನ ಹೃದಯದ ಎಳೆ ಎಳೆದಂತಾಗಿ ಯಕ್ಷ, ನಿನ್ನ ನ...

ಅಮ್ಮನ ತೊರೆದು ನಾವೆಲ್ಲ ಬದುಕುವ ಶಕ್ತಿ ನಮಗಿಲ್ಲ ಅವಳ ಉಸಿರಲಿ ಉಸಿರಾಗಿ ಬಾಳು ಬದುಕುವೆವು ನಾವೆಲ್ಲ || ಅಮ್ಮನ ರೀತಿಯೆ ಆ ಸಿಂಧು ಗಂಗೆ ಯಮುನೆ ಕಾವೇರಿ ತುಂಗೆ ಭದ್ರೆ ನಮ್ಮಯ ಬಾಳಿಗೆ ಆಧಾರವು ನಮ್ಮನ್ನು ಸಲಹುವ ತಾಯಿಯರು || ಜಾತಿ ಭೇದಗಳು ನಮಗಿ...

ಪ್ರಿಯ ಸಖಿ, ನಮ್ಮದು ಹಲವು ವೈರುಧ್ಯಗಳನ್ನು ದ್ವಂದ್ವದ ವಿಚಾರಗಳನ್ನು ತುಂಬಿಕೊಂಡಿರುವ ದೇಶ. ಪ್ರಜಾತಂತ್ರ ಆಡಳಿತ ವ್ಯವಸ್ಥೆಯಿರುವ ನಮ್ಮ ದೇಶವನ್ನು ನಾವು ಜಾತ್ಯಾತೀತ ದೇಶ ಎಂದು ಕರೆದುಕೊಳ್ಳುತ್ತೇವೆ. ಇಲ್ಲಿ ಲೆಕ್ಕವಿಲ್ಲದಷ್ಟು ಜಾತಿಗಳಿದ್ದರೂ ...

ನಿತ್ಯ ಕಾಡುತ್ತಿವೆ ಏನಗೆ ಗುಣತ್ರಯಗಳು ಅವೇ ರಜ ತಮ ಮತ್ತು ಸತ್ವಗಳು ಒಂದೊಂದು ತನ್ನ ಇತಿಹಾಸ ಬಿತ್ತುವವು ಈ ಮೂರು ಜೀವನ ಬಂಧನಕ್ಕೆ ಕಾರಣಗಳು ಸ್ವಾರ್ಥ ಆಸೆ ಭೋಗದಲ್ಲಿ ತೇಲಿಸುವುದು ತಮಗುಣವೆಂಬ ಕಾಣದ ಜಾತ ಶತ್ರು ದೇಹ ಸುಖವೆ ಇದರ ಗುರಿಯಾಗಿಹುದು ...

ನೀನು ಯಾರು? ಎಲ್ಲಿಂದ ಬಂದೆ ನೀನು?| ನೀನು ಬಂದ ಕಾರ್ಯವೇನು? ನಿನ್ನ ಕಾರಣಕರ್ತೃನು ಯಾರು?|| ನಾನು ಯಾರೆಂದು ತಿಳಿಯಲು ಇಲ್ಲಿ ಬಂದಿಹುದು| ನಾ ಎಲ್ಲಿಂದ ಬಂದೆ ಎನ್ನುವುದ ಅರಿಯನು ಇಲ್ಲಿ ಬಂದಿಹುದು| ನನ್ನ ಕೆಲಸ ಕಾರ್ಯಗಳ ಮನನ ಮಾಡಲೆಂದೇ ಇಲ್ಲಿ ಬ...

ಏನು ಹೇಳಲಿ ನಮ್ಮ ಶಿವರಾತ್ರಿ ಜಾಗರಣೆಯ ಪಿಶಾಚಿಗಳಂತೆ ರಾತ್ರಿ ಎಲ್ಲವ ಕಳೆದು, ಬೀದಿ ಬೀದಿಯ ಸುತ್ತಿ ಬೊಗಳುತಿಹ ನಾಯಿಗಳ ಮುಂದೆ, ನಗರ ಕಾಯುತಿಹ ಪೊಲೀಸರ ಹಿಂದೆ, ಅಲೆದಲೆದು ಶಿವನ ಗುಡಿಯ ಮುಂದೆ, ದಾಸರ ಶಿವಕಥೆಯ ಚಪ್ಪರದಲ್ಲಿ ಕ್ಷಣ ಹೊತ್ತು ನಿಂತು...

ಇದ್ದಾಗ ಕಣ್ಣಿಗೆ ಕ್ಷಣಮಾತ್ರವೂ ಬೀಳದೆ ಸತ್ತಾಗ ಸರ್ಕಲ್ಲು ಪಾರ್ಕುಗಳ ಮಧ್ಯೆ ಎದ್ದು ನಿಲ್ಲುವವರು ಕಂಡಕಂಡವರ ಕೈಯ ಚಲಾವಣೆಗೆ ಸಿಕ್ಕಿ ನಾಣ್ಯವಾಗುವವರು. ಅಂಚೆಯಲ್ಲಿ ಸಂಚರಿಸುತ್ತ ಊರೂರಲ್ಲಿ ಸದೆಬಡಿಸಿಕೊಳ್ಳುವ ತಾಳ್ಮೆ ತಳೆದವರು. ದೇಶಭಕ್ತಿಯ ದತ್...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...