ನೀ ಬರುವ ದಾರಿಯಲಿ

ನೀ ಬರುವ ದಾರಿಯಲಿ
ನಿನ್ನ ನೆನಪುಗಳೇ
ಸುಳಿದಾಡೋ ಗಾಳಿಯಲಿ
ತಂಪೆರೆವ ಹನಿಗಳೇ ||

ಮನದ ಕೂಗು ಕೇಳದೆ
ಮನದಿಂದ ಹಾಡುವ
ತುಡಿತದ ನೋವುಗಳೇ
ಎನ್ನ ಕಾಡುವ ದನಿಗಳೇ ||

ಕಲ್ಲು ಮನಸ್ಸು ನಿನ್ನದು
ಕರಗದು ನಿನ್ನ ಮನವು ಮರುಗದು
ನಾ ನಿನಗೆ ಮನವ ನೀಡಿ
ಸೋತು ಹೋದೆ ನಾನೂ ||

ಸರಸಿಜನಾಭನೆ ಕೇಳು
ನೀನಿಲ್ಲದೆ ನಾ ಬಾಳುವೆ
ಛಲ ಹಿಡಿದು ಬದುಕುವೆ
ರುಕ್ಕಿಣಿ ಪತಿಯೇ ||

ರಾಧೆಯು ನಾನು ನನ್ನ
ಮಾಧವ ನೀನು
ಎಲ್ಲಿರಲೇನು ನಾ ನಿನ್ನ
ಭಕ್ತಿ ಚೈತನ್ಯದ ಕುಸುಮವೂ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೆವ್ವದ ಕೋರ್ಟಿನಲ್ಲಿ
Next post ಬಹಳ ಕಂಡಿದ್ದೇನೆ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…