ರೊಟ್ಟಿ ಹಸಿವಿನ
ನಡುವೆ ಒಂದು
ನಿಗೂಢ ಕಾಲುವೆ.
ಗುಪ್ತಗಾಮಿನಿಯೊಡಲಲ್ಲಿ
ಹಾಗೇ ಸುಪ್ತವಾಗಿದೆ
ಖಾಸಗಿ ಕ್ಷಣಗಳು.
ಅವರು ಸಾಕ್ಷಿ ಕೇಳುತ್ತಾರೆ
ರೊಟ್ಟಿ ಹಸಿವು
ಒಳಗೇ ನಗುತ್ತವೆ.
*****