ದೇಶವನು ಕೈಯಲ್ಲಿ ಎತ್ತಿ ಹೃದಯದಲ್ಲಿಡು ತಾನಾಗಿ ಮೂಡುತ್ತದೆ ತಾಳಲಯ ನಿಲ್ಲಿಸಿ ಪ್ರಳಯಶೌರವ. *****...
ಜೀವ ಇರುವವರೆಗೂ ಸದಾ ಮಾಸದೆ ನೆನಪಲೇ ಇರುವ ಕಾಣಿಕೆ ಒಂದಿತ್ತು ನಾವು ಭೇಟಿಯಾದ ಹೊತ್ತು ಯಾರೂ ಕದಿಯದ ಎಲ್ಲೂ ಕಳೆಯದ ಮತ್ತಾರಿಗೂ ಕಾಣದ ಕಾಣಿಕೆ ಅದು ನನಗೇ ಗೊತ್ತು ಅದು ಮನದಲ್ಲೇ ಇತ್ತು ನಿನಗೆ ಕೊಡಲೆಂದೆ ಇತ್ತು ಕಣ್ಣಲ್ಲಿ ಏನೋ ಕಾತರ ಮನದಲ್ಲಿ ಏನ...
ಹಣ ವಸ್ತು ವಿನಿಮಯದ ಮಾಧ್ಯಮ- ಆಗಿದೆ ಜೀವನದ ಗುರಿ. ಗಳಿಸಲುಂಟು ನೂರಾರು ದಾರಿ ಭಿಕ್ಷೆಯಿಂದ ಹಾದರದವರೆಗೆ ಲಂಚ, ಕಳವು, ಜೂಜೂ ಸೇರಿ, ದುಡಿಮೆಯದಕೆ ತುಚ್ಛ ದಾರಿ! ಬಾಳಲೆಂದು ಗಳಿಸ ಹೋಗಿ, ಗಳಿಸಲೆಂದೇ ಬಾಳುತಿಹರು. ಸೇರಿದವರಿಗೇ ಹೆಚ್ಚೆಚ್ಚು ಸೇರುವ...
ಹುಟ್ಟಿದೂರಿನ ಬಗೆಗೆ ಇರುವ ಭಾವನಾತ್ಮಕ ನೆಲೆ ಹೇಗಿರುತ್ತದೆಯೆಂಬುದನ್ನು ಅನುಭವಿಸಿಯೇ ತಿಳಿಯಬೇಕು. ವ್ಯಾವಹಾರಿಕತೆಯನ್ನು ಮನೋಧರ್ಮವನ್ನಾಗಿ ಮಾಡಿಕೊಂಡವರಿಗೆ ಮಾತ್ರ ವಿಶೇಷ ಸೆಳೆತಗಳು ಸಾಧ್ಯವಿಲ್ಲ. ಇಂಥವರು ಎಲ್ಲಿದ್ದರೇ ಅಲ್ಲೇ ಹುಟ್ಟಿದಂತೆ ಭಾವ...
ಅವಳ ನೆನಪಿನ ಮಾಳಿಗೆ ಮೇಲೆ ತಿರುಗುವ ಗಳಿಗೆ ತಣಿಯುವುದು ಒಡಲಾಳದ ಬೇಗೆ *****...
ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ ಹೊಸಗಂಡ ರಸಗಂಡ ಕೈಯತಾರ ||ಪಲ್ಲ|| ಸಪ್ಪಾನ ಸಪ್ಪಾಟಿ ಆ ಗಂಡ ಹಳೆರಗಟಿ ನನಗೆಣಿಯ ನೀ ಠೀಕು ಠುಮುಠುಮುಕಿ ತಾತಾರ ಬಾಬಾರ ಸರದಾರ ಸಾವ್ಕಾರ ನಿನ ಜೀವ ಗೆಳತ್ಯಾನು ಝುಮುಝುಮುಕಿ ||೧|| ಕುಂತುಂಡ್ರ ಪಡಿರೊಟ್ಟಿ ತಿಂತಾ...
ಗುಂಡನಿಗೆ ಸಮಾಜ ಶಾಸ್ತ್ರದ ಪರೀಕ್ಷೆಯಲ್ಲಿ ರೈಲು ಪ್ರಯಾಣದ ಕುರಿತು ಮೂರು ಪುಟ ಬರೆಯಲು ಕೊಟ್ಟರು. ಗುಂಡ ಬರೆದ “ನಾನು ನಮ್ಮಜ್ಜನ ಮನೆಗೆ ರೈಲಿನಲ್ಲಿ ಹೊರಟೆ ರೈಲು ಚಕು-ಬುಕು…ಚಕು-ಬುಕು.. ಮೂರು ಪುಟ ಬರೆದು, ನಂತರ ಬರೆದ – ರ...
ಮಸೀದಿಗಳ ಉರುಳಿಸಿ ಮಂದಿರಗಳ ಕಟ್ಟುವವರೇ ಬಿದ್ದಿರುವ ಮನಗಳನ್ನೆಂತು ಎತ್ತಿ ನಿಲ್ಲಿಸುವಿರಿ ಹೇಳಿ? ಬಿದ್ದ ಗೋಡೆಗಳ ಮತ್ತೆ ಎತ್ತಿ ನಿಲ್ಲಿಸಲೂ ಬಹುದು ಎರಡು ಮನಗಳ ಮಧ್ಯ ಎದ್ದ ಗೋಡೆಯನ್ನೆಂತು ಬೀಳಿಸುವಿರಿ? ಹೇಳಿ. ಕಂಡಿದ್ದೆವು ಹಿಂದೆ ಚರಿತ್ರೆಯಲಿ...
ಸರಕಾರಿ ನೌಕರರು, ಹೊಸತಾಗಿ ಸೇರಿಹರು ಕಿರಿ ಕಿರಿಯಿದ್ಯಾಕೆಂದು ಲಂಚಕೊಗ್ಗಿಕೊಳ್ಳುವಂದದಲಿ ತರಕಾರಿ ಸಾವಯವವೆಂದು ಮೊದಲೊಳಂದವರು ಬರಬರುತೆ ಅರ್ಥ ಪಂಡಿತರಾಗುತಿಹರಿಲ್ಲಿ ಬರಿ ವ್ಯರ್ಥವೆಲ್ಲ ಪರಿಸರದ ಭಾಷಣವು ಬರದಲ್ಲಿ – ವಿಜ್ಞಾನೇಶ್ವರಾ ****...
ಸೋದರಿಯು ಇವಳೆನ್ನ ಅದರಿಸಿ ಬರಿಸಿ, ಹರಸಿ, ಸೋದರನ ತನು-ಮನವು ರೋಸಿಹೋಗುವ ಮುನ್ನ ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು ಸೋಲು ಅಡಿಗಡಿಗೆ ಕಾಲಿರಿಸಿತ್ತು. ಗೇಲು ಎಲ್ಲಿಯೊ ಕಾಲು ಕಿತ್ತಿತ್ತು. ಅಂದು ಜೀವನದ ಮಾಮರದ ಅಡಿಯೇಳತಿತ್ತು. ತಂದೆ ಸಾವಿಗೆ ಸಿಲ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






