ಏನಿದೇನಿದೆಲ್ಲರೊಳೆಲ್ಲದರೊಳ್ ತಪ್ಪು ಕಾಣುವಿರೆನ್ನದಿರಿ
ಎನ್ನ ತಪ್ಪಲ್ಲವಿದು ಎಮ್ಮಾಯುರ್ವೇದದರಿವಿರ್‍ಪುದಿಂತು
ಏನಾದರಾಗಲೆನ್ನ ಮನವೊಪ್ಪದಾ ದಾರಿಯನು ಎಂತು
ಅನುಸರಿಪುದೆನ್ನದಿರಿ. ಎಲ್ಲೆಡೆಯೊಳಿಳೆಯಾರೋಗ್ಯ ಕುಂದಿರಲು
ಆನೇನ ಮಾಡಲೆಲ್ಲಿ ಪೋದರು ಪೊದರಿರದ ಬರವೆನ್ನ ಸುಡುತಿರಲು – ವಿಜ್ಞಾನೇಶ್ವರಾ
*****