“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯೋ… ಚಳಿ! ಚಳಿ!&#...

ನನಗೂ ಸ್ವಲ್ಪ ಕಾಲಾವಕಾಶ ಕೊಡು ನಿನ್ನ ಪರೀಧಿಯಿಂದ| ಪ್ರೇಮಾನುಬಂಧನದಿಂದ ಸ್ವಲ್ಪ ಹೊರಗೆ ಹೋಗಿ ಜಗವ ಸುತ್ತಿ ನೋಡುವೆ| ಹಾಗೆ ವಿಹರಿಸಿ ಸಲ್ಪ ಮಜವ ತಂದುಕೊಳ್ಳುವೆ ನವನಾಗರೀಕರಂತೆ ನಾನು ನಟಿಸಲು ಪ್ರಯತ್ನಿಸುವೆನು|| ಗೆಳೆಯರೊಡನೆ ಸೇರಿ ಹರಟೆ ಹೊಡೆದ...

ಒಪ್ಪೊತ್ತಿನ ಊಟದಲ್ಲಿ ಹರಕು ಬಟ್ಟೆ ಬೆಳಕಿನಲ್ಲಿ ಅಳುವಿನಲ್ಲಿ ನಗುತ ನಾನು ಸೆಳವಿನಲ್ಲಿ ತೇಲುತ- ನೆಲವ ನೆಚ್ಚಿ ಇದ್ದೆನು ಬೆವರಿನಲ್ಲಿ ಬಾಳುತ ಒಡಲ ಸುಖ, ಪ್ರೀತಿ ಮಾತು ಬರುವುದೆಂದು ಕಾಯುತ. ಮಹಲಿನಿಂದ ಕುರ್ಚಿಯಿಂದ ಭೂಮಿಯೊಡಲ ಬಿರುಕಿನಿಂದ ಎದ್ದ...

ಜೀವನದ ಹಲವಾರು ಘಟ್ಟಗಳಲ್ಲಿ ಬಾಲ್ಯ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಕುವ ಕಾಲ. ಆಗ ಮೈಗೂಡಿಸಿಕೊಳ್ಳುವ ಉತ್ತಮ ಗುಣಗಳು ಅವನ ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಸುಂದರ ಒಡವೆಗಳಾಗುತ್ತವೆ. ಜೀವನವಿಡೀ ಅವನ ಜೊತೆಗಿರುತ್ತವೆ. ಬೆಳೆಯುವ ಮಕ...

ನಮ್ಮ ನಾಯಿ ಹೆಸರು ನಿಮಗೆ ಗೊತ್ತುಂಟ? ವಾಲಿಕೊಂಡು ನಡೆಯುತಿದೆ ಅದಕೇ ಇಟ್ಟೆ ಸೊಟ್ಟ ಹಾಲು ಬ್ರೆಡ್ಡು ನಿತ್ಯ ಕೊಡುವೆ ಅದಕೆ ಹೊಟ್ಟೆ ತುಂಬ ಚಂದ್ರನ ಹಾಗೆ ಬೆಳೆಯುತ್ತಿದೆ ಅದಕೇ ಭಾರಿ ಜಂಭ ನಾನು ಮನೆಗೆ ಬಂದೆನೆಂದರೆ ಕುಣಿ ಕುಣಿದಾಡುತ್ತೆ ಅಮ್ಮ ಕೊಡ...

ಅಮ್ಮ ನಾನು ನೀನು ಸುತ್ತೋಣ ಬೆಟ್ಟ ಕಾನು ಎಲ್ಲೆಲ್ಲೂ ಮರಗಳ ಗುಂಪು ಅವುಗಳ ನೆರಳದು ತಂಪು ಮರವನು ತಬ್ಬಿದ ಬಳ್ಳಿ ಕೆರೆಯಲ್ಲಿದೆ ಮಿಂಚುಳ್ಳಿ ಜಲ ಜಲ ಜಲ ಜಲ ಧಾರೆ ಇವೆಲ್ಲಾ ಮಾಡ್ದೋರ್‍ಯಾರೆ ಕಣ್ಣಿಗೆ ಹಸಿರಿನ ಹಬ್ಬ ಹತ್ತೋಕೆ ಕಷ್ಟ ದಿಬ್ಬ ಭಾರಿ ಗಾತ...

ಆಕಾಶದಿಂದ ಜಾರಿ ನಕ್ಷತ್ರ ಗುಂಪಿನಿಂದ ಕಳಚಿ ಬಿದ್ದ ಒಂಟಿ ನಕ್ಷತ್ರ, ರಾತ್ರಿ ಕತ್ತಲಲಿ ಉದುರುವ ಮಿಂಚು, ಹಗಲಿನಲ್ಲೇಕೆ ಹುಡುಕುವಿರಿ? ನೋವಿನ ಸುರಂಗದಿಂದ ಕಣ್ಣುಗಳ ಆಳಕ್ಕಿಳಿದು ಝಲ್ಲೆಂದು ಉದುರುವ, ಗಾಢ ಕತ್ತಲೆಯಲಿ ಜಾರುವ ಬೆಳಕಿನಕಿಡಿ ಮಿಂಚಿನ ...

ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ...

ನಾ ಮೊದಲು ಕಂಡಿದ್ದು- ಬೃಂದಾವನ ಗಾರ್ಡನ್‌ನ ಸಂಗೀತ ಕಾರಂಜಿಯನ್ನು ನಂತರ ಎದೆತುಂಬಿ ಹಾಡಿದೆನು… ಆ ನಂತರ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದಲ್ಲಿ- ದಸರಾ ಗೋಷ್ಠಿಗಳಲ್ಲಿ ಅಬ್ಬಾ! ಮೈಸೂರಿನಲ್ಲಿ ಮನೆಮನೆಗಳಲ್ಲಿ ಸಂಗೀತ ಕಾರಂಜಿ ಹರಿಯುತ್ತಿ...

ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ| ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ| ಹ್ವಾರ್ಯಾನಿಲ್ಲೇನೊ || ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ| ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ| ನಾರ್ಯಾರಿಲ್ಲೇನೊ |೧| ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ|...

ಗೂಡು ಕಟ್ಟಿದ ಹಕ್ಕಿ ತೊರೆದು ಹೋಯಿತಲ್ಲೊ ಹಾಡು ಮಾಡಿದ ಕೊಳಲ ಮುರಿದು ಹೋಯಿತಲ್ಲೊ || ಪ || ಬಿರುಬಿಸಿಲಿನ ಬನಕೆ ಹಸಿರಾಗುವೆನೆಂದು ಬಿರಿದು ನಿಂತ ನೆಲಕೆ ಮಳೆಯಾಗಿ ಬರುವೆನೆಂದು ನುಡಿದು ಹೋದ ಮಾತು ಅದರೊಡನೆ ಹೋಯಿತಲ್ಲೊ ಬಳಲಿ ಬೆಂದ ಬದುಕು ಮುಂಗಾ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...