ನನಗೂ ಸ್ವಲ್ಪ ಕಾಲಾವಕಾಶ ಕೊಡು
ನಿನ್ನ ಪರೀಧಿಯಿಂದ|
ಪ್ರೇಮಾನುಬಂಧನದಿಂದ
ಸ್ವಲ್ಪ ಹೊರಗೆ ಹೋಗಿ
ಜಗವ ಸುತ್ತಿ ನೋಡುವೆ|
ಹಾಗೆ ವಿಹರಿಸಿ ಸಲ್ಪ
ಮಜವ ತಂದುಕೊಳ್ಳುವೆ
ನವನಾಗರೀಕರಂತೆ ನಾನು
ನಟಿಸಲು ಪ್ರಯತ್ನಿಸುವೆನು||

ಗೆಳೆಯರೊಡನೆ ಸೇರಿ
ಹರಟೆ ಹೊಡೆದು,
ತರತರದ ಕಾರ್‍ಡು ಆಡಿಬರುವೆನು|
ರಾತ್ರಿ ಪಬ್ಬು ಕ್ಲಬ್ಬುಗಳಿಗೆ ಹೋಗಿ
ಕಣ್ತುಂಬಾ ರಂಗುರಂಗಲಿ ತೇಲಿಬರುವೆನು|
ಇತ್ತ ಬರುವಾಗ ನಿನಗಾಗಿ
ಗೋಭಿಮಂಚೂರಿ, ಐಸ್‌ಕ್ರೀಮ್
ಪಾರ್‌ಸಲ್ ತರುವೆನು||

ಈಗಿನ ನಾಗರೀಕತೆಯ ನಾನು ಕಲಿತು
ನಡೆದು ಕೊಳ್ಳಬಯಸುವೆನು|
ಝೀನ್ಸು ಪ್ಯಾಂಟು, ಟೀ ಶರ್‍ಟು,
ನೈಕ್ ಶ್ಯುಸ್ ಧರಿಸಿ ಪಾಸ್ಟ್ ಟ್ರ್ಯಾಕ್
ವಾಚ್ ಕೈಗೇರಿಸಿ ನಡೆವೆನು|
ಆಪೇಲ್ ಸಿಕ್ಸ್ ಎಸ್ ಮೊಬೈಲ್ ಹಿಡಿದು
ನಿನ್ನೊಡನೆ ವಾಟ್ಸಾಪ್‌ಲೇ
ಚಾಟ್ ಮಾಡುವೆನು|
ಸ್ನೇಹಿತರೊಡನೆ ಸೆಲ್ಪೀ ತೆಗೆದು
ನಿನಗೆ ಪೋಟೋ ಷೇರ್ ಮಾಡುವೆನು||

ಸುಂದರ ಶಾಪಿಂಗ್ ಮಾಲ್‌ಗಳಿಗೆ ಹೋಗಿ
ಪಿ.ವಿ.ಅರ್, ಮಲ್ಟಿಪ್ಲೆಕ್ಸಲಿ
ರಿಲೀಜ್ ಸಿನೆಮಾ ನೋಡಿ ಬರುವೆನು|
ಸಿನೆಮಾ ಚಿನ್ನಾಗಿರೆ ಬಳಿಕ
ನಿನ್ನನೂ ಕರೆದೊಯ್ಯುವೆನು|
ಡಾಮಿನೊಸ್, ಮ್ಯಾಕ್‌ಡೊನಾಲ್ಡ್‌ನಲಿ
ನಿನಗೂ ಫ್ಹೀಜಾ, ಬರ್‌ಗರ್ ಕೊಡಿಸಿ
ನಿನ್ನ ಬಾಯನು ಹಿಗ್ಗಿಸುವೆನು|
ಅಸಿಡಿಟಿ ಹೋಗಲಾಡಿಸೆ
ಸ್ವೀಟ್ ಸೋಡಾ ಕುಡಿಸುವೆನು||
*****