ಗೂಡು ಕಟ್ಟಿದ ಹಕ್ಕಿ
ತೊರೆದು ಹೋಯಿತಲ್ಲೊ
ಹಾಡು ಮಾಡಿದ ಕೊಳಲ
ಮುರಿದು ಹೋಯಿತಲ್ಲೊ || ಪ ||

ಬಿರುಬಿಸಿಲಿನ ಬನಕೆ
ಹಸಿರಾಗುವೆನೆಂದು
ಬಿರಿದು ನಿಂತ ನೆಲಕೆ
ಮಳೆಯಾಗಿ ಬರುವೆನೆಂದು
ನುಡಿದು ಹೋದ ಮಾತು
ಅದರೊಡನೆ ಹೋಯಿತಲ್ಲೊ

ಬಳಲಿ ಬೆಂದ ಬದುಕು
ಮುಂಗಾರು ಕಾಣುವಂತೆ
ಒಣಗಿ ನಿಂತ ನೆಲವು
ಹೊಸ ಹಸಿರು ಪಡೆಯುವಂತೆ
ಜೀವ ಪಡೆಯುವಾಗ
ಕತ್ತರಿಸಿ ಹೋಯಿತಲ್ಲೊ

ಬೇಡವಾದ ಬದುಕು
ಮಸಣದಾಟ ಕೂಟ
ಮುರಿದು ಬಿದ್ದ ಜಂತಿ
ಯಾರಿಗೂ ಬೇಡ ನೋಟ
ಸಾವಿಗೂ ಇಲ್ಲಿ ಕರುಣೆ
ಇಲ್ಲವಾಯಿತಲ್ಲೊ!
*****