ಆಕಾಶದಿಂದ ಜಾರಿ
ನಕ್ಷತ್ರ ಗುಂಪಿನಿಂದ
ಕಳಚಿ ಬಿದ್ದ
ಒಂಟಿ ನಕ್ಷತ್ರ,
ರಾತ್ರಿ ಕತ್ತಲಲಿ
ಉದುರುವ ಮಿಂಚು,
ಹಗಲಿನಲ್ಲೇಕೆ ಹುಡುಕುವಿರಿ?
ನೋವಿನ ಸುರಂಗದಿಂದ
ಕಣ್ಣುಗಳ ಆಳಕ್ಕಿಳಿದು
ಝಲ್ಲೆಂದು ಉದುರುವ,
ಗಾಢ ಕತ್ತಲೆಯಲಿ
ಜಾರುವ ಬೆಳಕಿನಕಿಡಿ
ಮಿಂಚಿನ ಸೆಳಕು.
ಮಿಂಚಿ ಮಾಯವಾಯಿತೇಕೆ?
ಮಿಚನು ಹುಡುಕಲು
ಹೊರಟ ಚಂದ್ರನ
ಜೋಲು ಮುಖದಲಿ
ನಿರಾಸೆಯ ಛಾಯೆ,
ನೆತ್ತರು ಕೆಂಪಿನೊಡನೆ
ಮಿಂಚನು ಹುಡುಕಿ ತರಲು
ಹೋದ ಸೂರ್ಯನ
ಕಪ್ಪು ಮುಖದಲಿ
ಗೆಲುವಿಲ್ಲ ಕಳೆಯಿಲ್ಲ
ಮಿಂಚಿ ಮಾಯವಾದ
ಉದುರುವ ನಕ್ಷತ್ರವನು
ಹುಡುಕುವುದೆಲ್ಲೀಗ ?
*****