ತಾಯಿ ಮಂಗಲ ತೋಳ ತೊಟ್ಟಿಲ ತೂಗಿ ಲಾಲಿ ಹಾಡಿ; ಮಗುವೆ ಅಳದಿರು ಹಾಲು ಹೊಳೆಯಿದೆ ಎಂದೆ ಮುದ್ದು ನೀಡಿ. ನಿನ್ನ ‘ದರ್ಶನ’ ನನ್ನ ಬಾಳಿಗೆ ದಿವ್ಯ ದೀಪ ಕಿರಣ; ಜೀವ ಜೀವದಿ ಹರಿದು ಬಂದಿದೆ ಇದಕೆ ಇಲ್ಲ ಮರಣ. ಸೂರ್ಯ ಚಂದಿರ ಬಯಲು ಬಾಂದಳ ಸಾಕ್ಷಿ ಇರಲಿ ಇದಕೆ! ಕಣ್ಣ ಕೊನೆಯಲಿ ನೀರ ಹನಿಯಿದೆ ನಮನವಿರಲಿ ...

(ಹಾಡು) ಗಿಳಿಬಾಗಿಲ ತೆರೆಯೆಯಾ? ಹೂ ದನಿಯಿನೆನ್ನ ಕರೆಯೆಯಾ? ಬದಲು ಬಿದುವ ತೋರೆಯಾ? ತಾ ರಾಕಟಾಕ್ಷ ಬೀರೆಯಾ? ೪ ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು. ೮ ಪಡುಹಾಸಂಗಿಯೆಡೆಯಲಂ ಗಾತ ಬಿ...

ಕಣ್ಣೋಟವೋ . . . ಚೆಲ್ಲಾಟವೋ . . . ನೀನು ಕಣ್ಣಲ್ಲೆ ನುಡಿದ ಮಾತು ಕವಿತೆಯಾಗಿದೆ; ನನ್ನ ಕವಿಯ ಮಾಡಿದೆ – ನಿನ್ನ ಹೆಜ್ಜೆಯಲ್ಲಿ ಕಂಡ ನಡಿಗೆ ನವಿಲು ಆಗಿದೆ; ಪ್ರೀತಿ ಸೋನೆ ಸುರಿಸಿದೆ// ಕೆಂಪಾಗಿದೆ . . . ರಂಗೇರಿದೆ . . . ನಿನ್ನ ಕೆಂಪಾ...

ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ ತೆಗೆದುಕೊಂಡಿದ್ದರಿಂದ ನಮ್ಮಲ್ಲಿ ...

ಮಳೆಗೆ ಸಿಗದಂತೆ ನಿಂತಿದ್ದರೂ ಈಗ ಮುರಿದೊಂದು ಮರದ ಕೆಳಗೆ, ಎಲ್ಲ ಕುರ್‍ಚಿಗೂ ಮೊದಲು ಬೆಚ್ಚನೆಯ ಜಾಗದಲಿ ಕಾದಿರುತ್ತಿತ್ತೊಂದು ಕುರ್‍ಚಿ ನನಗೆ ರಾಜಕಾರಣ, ಪ್ರೇಮ ಇತ್ಯಾದಿ ಚರ್‍ಚಿಸುವ ಗೋಷ್ಠಿಯೊಳಗೆ, ಕಾಲ ಏಕಾ‌ಏಕಿ ನನ್ನ ಪರಿವರ್‍ತಿಸುವ ಮುಂಚೆ ಹ...

ರಾಮೂ ಶ್ಯಾಮೂ ಇಬ್ಬರೂ ಒಳ್ಳೆಯ ಸಂಗಾತಿಗಳು. ಯಾವಾಗಲು ಅವರು ಜತೆಯಲ್ಲೇ ಇರುವರು. ಅಡುವಾಗ ಇಬ್ಬರೂ ಒಟ್ಟಿಗೆ ಆಡುವರು. ಓದುವಾಗ ಇಬ್ಬರೂ ಓದುವರು ಆದರೂ ಇವರಿಬ್ಬರಿಗೂ ಒಂದು ಭೇದವಿತ್ತು. ರಾಮು ಹೊತ್ತಿಗೆ ಸರಿಯಾಗಿ ಶಾಲೆಗೆ ಬರುವನು. ಶ್ಯಾಮು ಹೊತ್ತ...

ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ ಪವನವಾಯ್ತು ತಾಮ್ರದ ವೈ ಕತ್ತಲೆಯೇ ಎತ್ತಿದ ಕೈ. ಮರುಳೆಂದವು – ಸೈ, ಸ...

– ಪಲ್ಲವಿ – ಪ್ರೇಮಸುಧಾಮಯಿ ಶಕುಂತಲೇ ! ಜೀವನಕೌಮುದಿ ಪೂರ್ಣಕಲೇ ! ೧ ಸುರಸೌಂದರ್ಯದ ಮನದೊಳು ಮೊಳೆದೆ, ಪರಮತಪೋರಾಶಿಯ ಫಲ ತಳೆದೆ ; ಧರಣಿಯ ಚೆಲುವಿನ ಕೆಳೆಯಲಿ ಬೆಳೆದೆ- ಗುರುಕಾಶ್ಯಪಲಾಲಿತ ಬಾಲೇ, ಪ್ರೇಮಸುಧಾಮಯಿ ಶಕುಂತಲೇ ! ೨ ನಿನ...

ಯೆಂಡ ಮುಟ್ದಾಗ್ಲೆಲ್ಲ ನಂಗೆ ಏನೋ ಕುಸಿಯಾಗೈತೆ! (ಕುಡಕನ್ ಮಾತ್ ಅಂದ್ರಂಗೆ ಅಲ್ಲ! ನೆಗ ಉಕ್ಕ್ ಬರತೈತೆ?) ೧ ಈಚಲ್ ಮರದಲ್ಲ್ ಮಲಗಿದ್ದ್ ಯೆಂಡ ಕಟ್ಟಿದ್ ಮಡಕೇಗ್ ಅರ್‍ದು ಬಾರಿ ಪೀಪಾಯ್ನಾಗ್ ಇಳಕೊಂಡಿ ತುಂಬ್ಕೋಂತೈತೆ ಸುರ್‍ದು. ೨ ಅಲ್ಲಿಂದ್ ಇಲ್ಗೆ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...