ರತ್ನನ್ ಕುಸಿ

ಯೆಂಡ ಮುಟ್ದಾಗ್ಲೆಲ್ಲ ನಂಗೆ
ಏನೋ ಕುಸಿಯಾಗೈತೆ!
(ಕುಡಕನ್ ಮಾತ್ ಅಂದ್ರಂಗೆ ಅಲ್ಲ!
ನೆಗ ಉಕ್ಕ್ ಬರತೈತೆ?) ೧

ಈಚಲ್ ಮರದಲ್ಲ್ ಮಲಗಿದ್ದ್ ಯೆಂಡ
ಕಟ್ಟಿದ್ ಮಡಕೇಗ್ ಅರ್‍ದು
ಬಾರಿ ಪೀಪಾಯ್ನಾಗ್ ಇಳಕೊಂಡಿ
ತುಂಬ್ಕೋಂತೈತೆ ಸುರ್‍ದು. ೨

ಅಲ್ಲಿಂದ್ ಇಲ್ಗೆ ಇಲ್ಲಿಂದ್ ಅಲ್ಗೆ
ಪೀಪಾಯ್ನಲ್ಲ್ ಉಳ್ಳಾಡಿ
ಕುಡಕನ್ ಬುಂಡೇಲ್ ಉಟ್ಕೋಂತೈತೆ!
ಎಂತಾ ಜನ್ಮ ನೋಡು! ೩

ರಬ್ಬರ್ ಚೆಂಡನಂಗ್ ಅಲ್ಲಿಂದ್ ಇಲ್ಗೆ
ಯೆಂಡ ಉಳ್ಳಾಡ್ತಿದ್ದು
ಕೊನೆಯಾಗ್ ಸಾಂತಿ ಕಂಡ್ಕೋಂತೈತೆ
ಕುಡಕನ್ ಒಟ್ಯಾಗ್ ಬಿದ್ದು! ೪

ಸಿಕ್ಕಿದ್ ದೇಅ ತಬ್ಬಿಡಕೊಂಡಿ
ಆತ್ಮ ಅಲಿಯೋವಂಗೆ
ಯೆಂಡ ಅಲದಿದ್ ನೆಪ್ ಮಾಡ್ಕಂಡ್ರೆ-
ಮೈ ಝುಂ ಅಂತದ್ ನಂಗೆ! ೫

ಬ್ರಮ್ಮ ಅನ್ನೋ ಅದರಲ್ಲ್ ಆತ್ಮ
ಬೆರಕಂಡ್ ಓಗೋವಂಗೆ
ಬೆಸಕೊಂತೈತೆ ಮೈನಾಗ್ ಯೆಂಡ
ಗುರತೇ ಗೊತ್ತಾಗ್ದಂಗೆ! ೬

ಯೆಂಡ ಮುಟ್ದಾಗ್ಲೆಲ್ಲ ನಂಗೆ
ಏನೋ ಕುಸಿಯಾಗ್ತೈತೆ!
ಕುಸೀಗ್ ಕಾರಣ ಗೊತ್ತಾಯ್ತೀಗ-
ಕುಣಿಯೋವಂಗ್ ಆಯ್ತೈತೆ! ೭
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಶ
Next post ಬಿ.ಪಿ.

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…