ಕಣ್ಣೋಟವೋ ಚೆಲ್ಲಾಟವೋ

ಕಣ್ಣೋಟವೋ . . . ಚೆಲ್ಲಾಟವೋ . . . ನೀನು
ಕಣ್ಣಲ್ಲೆ ನುಡಿದ ಮಾತು
ಕವಿತೆಯಾಗಿದೆ; ನನ್ನ ಕವಿಯ ಮಾಡಿದೆ – ನಿನ್ನ
ಹೆಜ್ಜೆಯಲ್ಲಿ ಕಂಡ ನಡಿಗೆ
ನವಿಲು ಆಗಿದೆ; ಪ್ರೀತಿ ಸೋನೆ ಸುರಿಸಿದೆ//

ಕೆಂಪಾಗಿದೆ . . . ರಂಗೇರಿದೆ . . . ನಿನ್ನ
ಕೆಂಪಾದ ಕೆನ್ನೆಯಲ್ಲಿ ಗುಲಾಬಿ ಇದೆ – ಅದರ
ಒಂದೊಂದು ದಳವು ನನ್ನ ಹಗುರ ಮಾಡಿದೆ

ಮುಂಗುರುಳಲಿ . . . ಮುಂಗಾರಲಿ . . . ಅವಿತ
ನೂರೊಂದು ಕನಸು ಕರೆ ನೀಡಿದೆ – ಅದರ
ಒಂದೊಂದು ಝಲಕು ನನ್ನ ಕಳೆದಿದೆ

ಸೊಗಸಾಗಿದೆ . . . ಸೊಬಗೇರಿದೆ . . . ನಿನ್ನ
ತುಟಿಯಲ್ಲಿ ಕಂಡ ಲಾಸ್ಯ ಚಿತ್ತಾರವಾಗಿದೆ – ನನ್ನ
ಎದೆಯ ಬಾಗಿಲಲ್ಲಿ ರಂಗೋಲಿಯಾಗಿದೆ

ಮೌನರಾಗವೋ . . . ಮೋಹ ಪಾಶವೋ . . . ನಿನ್ನ
ಕಣ್ಣ ಗೂಡಿನಲ್ಲಿ ಬಂಧಿಯಾಗಿಹೆ – ನನ್ನ
ಬದುಕಿಗೆ ರೆಕ್ಕೆಪುಕ್ಕ ಮೂಡುತಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೊಳೆದ ಮುತ್ತು
Next post ಕೇಳಿಸದ ಕರೆ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…