ತಾಯಿ ಮಂಗಲ ತೋಳ ತೊಟ್ಟಿಲ ತೂಗಿ ಲಾಲಿ ಹಾಡಿ; ಮಗುವೆ ಅಳದಿರು ಹಾಲು ಹೊಳೆಯಿದೆ ಎಂದೆ ಮುದ್ದು ನೀಡಿ. ನಿನ್ನ ‘ದರ್ಶನ’ ನನ್ನ ಬಾಳಿಗೆ ದಿವ್ಯ ದೀಪ ಕಿರಣ; ಜೀವ ಜೀವದಿ ಹರಿದು ಬಂದಿದೆ ಇದಕೆ ಇಲ್ಲ ಮರಣ. ಸೂರ್ಯ ಚಂದಿರ ಬಯಲು ಬಾಂದಳ ಸಾಕ್ಷಿ ಇರಲಿ ಇದಕೆ! ಕಣ್ಣ ಕೊನೆಯಲಿ ನೀರ ಹನಿಯಿದೆ ನಮನವಿರಲಿ ...

ಕನ್ನಡ ಎಂದರೆ ಬರಿ ನುಡಿ ಅಲ್ಲ ಮುತ್ತಿನ ಮಣಿ ಸಾಲು ಕನ್ನಡ ಎನ್ನಲು ನಿನ ಕೊರಳಲ್ಲಿ ಸಂಗೀತದ ಹೊನಲು ಕನ್ನಡ ಎನುವ ಮೂರಕ್ಷರದಿ ಎನಿತೋ ಅರ್ಥವಿದೆ ಕನ್ನಡತನವ ಮೈಗೂಡಿಸಿದರೆ ಬಾಳಿಗೆ ಸತ್ವವಿದೆ ಕವಿ ಕೋಗಿಲೆಗಳು ಹಾಡಿವೆಯೆಂದರೆ ಕನ್ನಡದೇ ಮೊದಲು ಹಾಡಲ...

ಉಡುಪಿಯ ಅನಂತೇಶ್ವರ ದೇವಸ್ಥಾನದ ಪೌಳಿಯಲ್ಲಿ ಜನರದೊಂದು ಗುಂಪು. ಗಂಡಸು ಹೆಂಗಸರೆಂದು ಸುಮಾರು ಐವತ್ತು ಮಂದಿ ಗಂಟುಮೂಟೆಗಳನ್ನು ಕಟ್ಟಿ ಕೊಂಡು ಕುಳಿತಿರುವರು. ಅವರ ಬಳಿಯಲ್ಲಿ ಅವರ ಬಂಧುಬಾಂಧವರಿಷ್ಟಮಿತ್ರರ ವರ್ಗಕ್ಕೆ ಸೇರಿದವರನೇಕರು ಕುಳಿತು ಮಾತಾ...

ಕಣ್ಣನ್ನರೆ ಮುಚ್ಚಿಕೊ, ಹಾಯಾಗಿ ಸಡಿಲಿಸಿಕೊ ತಲೆಗೂದಲನ್ನು, ಹಿರಿಜೀವಗಳ, ಅವರ ಹೆಮ್ಮೆಗಳ ಕುರಿತು ಕನಸು ಕಾಣು ಅಲ್ಲಸಲ್ಲದ್ದೆಲ್ಲ ಆಡಿದ್ದಾರೆ ಜನ ಎಲ್ಲ ಕಡೆ ನಿನ್ನನ್ನು ಹಳಿದು, ಆದರೀ ಗೀತವನು ಹಿರಿಜೀವಗಳ ಜೊತೆ, ಅವರ ಹೆಮ್ಮೆಗಳ ಜೊತೆ ಇಟ್ಟು ತೂ...

‘ನನ್ನೂರು ನನ್ನವ್ವ’ ಡಾ ಭತಮುರ್ಗೆ ಚಂದ್ರಪ್ಪರವರು ಪ್ರಕಟಿಸಿದ ವಿಶಿಷ್ಟ ಗ್ರಂಥ. ಡಾ. ಭತಮುರ್ಗೆರವರು ತಮ್ಮ ಪಾಲಕರ ಕುರಿತಂತೆ ಜೀವನ ಗಾಥೆಯನ್ನು ಬಿಳಿ ಹಾಳೆಗಳ ಮೇಲೆ ಭಟ್ಟಿ ಇಳಿಸಿದ ಈ ಗ್ರಂಥ ನಿಜವಾಗಿಯೂ ಅನನ್ಯ. ಸುಮಾರು ೨೪೮ ಪು...

ಉಧೋ! ಉಧೋ! ಏಳಿರೆನ್ನು! ಇದೋ! ಇದೋ! ಎದ್ದೆವೆನ್ನು! ಎಲ್ಲು ಇಲ್ಲ ದೇವರು. ನಾವೆ ನಮ್ಮ ದೇವರು. ತಾಳಬೇಕು,-ಬಾಳಲು. ಸಹಿಸಬೇಕು,-ಆಳಲು. ಬಿನ್ನವಿಸಲು,- ಕೊಡುವದಿಲ್ಲ ! ಗರ್‍ಜಿಸೆ-ಕೊಡದಿರುವದಿಲ್ಲ ! ಹಣಕಾಸೆಳೆ ಬೈಲಿಗೆ. ಕೈಯ್ಯ ಹಚ್ಚು ಧೈಲಿಗೆ. ಹ...

– ಪಲ್ಲವಿ – ಊದುತಿರುವ ಮುರಲಿ- ಶ್ರೀ ಯಾದವೇಂದ್ರನಿಂದು ! ಕುಂಜವನದಿ ಬಂದು ನಿಂದು, ಊದುತಿರುವ ಮುರಲಿ ! ಹಿಮಕಿರಣ ನಭದಿ ಹೊಳೆಯೆ, ಮಧುಪವನ ವನದಿ ಸುಳಿಯೆ, ಸುಮಜಾತ ಸುರಭಿ ಸುರಿಯೆ – ರಮಣೀಯ ಭಾವ ಹರಿಯೆ – ಊದುತಿರುವ...

ಕುಡದ್ಬುಟ್ಟು ಮೋರೀಲ್ ನಾ ಬಿದ್ಕೊಂಡ್ ಇವ್ನೀಂತ್ ಏಳಿ ಎಲ್ಲಾರ ನೆಗ್ತಾರೆ ಸುಂಸುಂಕೇನೆ. ಎಲ್ರಂಗೇ ಮನ್ಸ-ಇವನೇನೋ ಒಸ್ ತಪ್ದಾಂತ ಅನ್ನಾಲ್ಲ-ಬೆಪ್ಗಳ್ಗೆ ಏನ್ ಏಳಾನೆ ! ೧ ಆಕಾಸ್ದಲ್ ಸೂರ್‍ಯಾವ್ನೆ-ದೊಡ್ಡ್ ಮನ್ಸ-ವಾಸ್ತವ- ಗ್ರಾಸ್ತ್ನಂತೆ ಅಗಲೆಲ್ಲ ...

ಮಂದಗತಿ ಮಂದತರವಾಗಿಬಿಟ್ಟಿದೆ; ಹುಲ್ಲೆ- ಗಂಗಳೊಳು ಚಂಚಲತೆ ಕುಡಿಯೊಡೆಯಲಿದೆ; ಉಡುಗಿ ಮೈನಯದ ನೆಯ್ಗೆ ತೊಪ್ಪಲು; ಹರೆಯ ಚಿಗುರಡಗಿ ನೆತ್ತರದ ನೆರೆಗೆಂಪು ಹಳಸುತಿದೆ ಭರದಲ್ಲೆ. ಹಾರು ಹಕ್ಕಿಯ ಪುಚ್ಚವೆಣಿಸಲೆಳಸಿದ ಬೆಡಗಿ! ವಿಜಯ ವಿಠ್ಠಲನ ಗುಡಿ ಭಣಗು...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...