ತಾಯಿ ಮಂಗಲ ತೋಳ ತೊಟ್ಟಿಲ ತೂಗಿ ಲಾಲಿ ಹಾಡಿ; ಮಗುವೆ ಅಳದಿರು ಹಾಲು ಹೊಳೆಯಿದೆ ಎಂದೆ ಮುದ್ದು ನೀಡಿ. ನಿನ್ನ ‘ದರ್ಶನ’ ನನ್ನ ಬಾಳಿಗೆ ದಿವ್ಯ ದೀಪ ಕಿರಣ; ಜೀವ ಜೀವದಿ ಹರಿದು ಬಂದಿದೆ ಇದಕೆ ಇಲ್ಲ ಮರಣ. ಸೂರ್ಯ ಚಂದಿರ ಬಯಲು ಬಾಂದಳ ಸಾಕ್ಷಿ ಇರಲಿ ಇದಕೆ! ಕಣ್ಣ ಕೊನೆಯಲಿ ನೀರ ಹನಿಯಿದೆ ನಮನವಿರಲಿ ...

ಏನೆಂಥ ದುರ್ಗತಿಯು ಬಂದೊದಗಿತಲಾ ಹೀನವೆನುತಾ ಮಧು ಫಲಕ ಬದಲಾಗಿ ತೃಣ ಧಾನ್ಯವನೆ ಸಿರಿಧ್ಯಾನವೆನುತಾರೋಗ್ಯವನು ಕನವರಿಸುತಲದದೇ ದಿನಪನುರಿಯನೇರಿಸುವ ದಿನಚರಿಯ ಮೋಹ ಮದ್ಯದೊಳಿರಲು – ವಿಜ್ಞಾನೇಶ್ವರಾ *****...

ಆಕಳು ಕಂಡೀರೇನೊಂದ || ಗೊಲ್ಲರ ಆಕಳ ಕಂಡಿರೇನು? ಆಕಳ ಪೀಕಳ ಕಾಣಲಿಲ್ಲಾ || ೧ || ಆಕಳ ಮಾರಿ ನೋ ಡಲಿಲ್ಲಾ ಮೊಳ ಮೊಳ ಉದ್ದನ ಕೋಡವಿತ್ತು || ೨ || ಆಕಳ ಮೊಳ ಉದ್ದನ ಬಾಲವಿತ್ತು ಅಡವಿ ಹುಲ್ಲಾಮೇಯೂತ್ತಿತ್ತೂ || ೩ || ಮಡುದಿ ನೀರು ಕುಡಿಯೂತಿತ್ತು ಸ...

ಈ ಸಮಯಕ್ಕೆ, ಮುಂದೆ ಕೋಸೆಟ್ಟಳ ಜೀವಮಾನದಲ್ಲಿ ವಿಶೇಷ ವಾಗಿ ಸಂಬಂಧಿಸುವ ಬಾಲಕನೊಬ್ಬನು ಪ್ಯಾರಿಸ್ ನಗರದಲ್ಲಿ ಬೆಳೆಯುತ್ತಿದ್ದನು. ಇವನ ಹೆಸರು ಮೋರಿಯಸ್ ಪಾಂಟ್ ಮರ್ಸಿ ಎಂದು. ಇವನು ಎಂ. ಜಿಲ್ಲೆ ನಾರ್ಮಂಡ್ ಎಂಬ ವೃದ್ಧನ ದೌಹಿತ್ರನು. ಈ ಹುಡುಗನ ತಾ...

ದೇವಾ ಎನ್ನ ಮನಕ್ಕೆ ರಕ್ಷಿಸು ಕಾಮಕ್ರೋಧ ಮತ್ಸರಗಳಿಂದ ದೇವಾ ಎನ್ನ ಮನಕ್ಕೆ ಶಿಕ್ಷಿಸು ಪುನಃ ಪುನಃ ಮಾಡುವ ತಪ್ಪುಗಳಿಂದ ಮನದಲಿ ಮೋಹ ಬಾರದಿರಲಿ ನಿತ್ಯ ಪ್ರಪಾತಕ್ಕೆ ತಳ್ಳುವುದು ಮನದಲಿ ಸ್ವಾರ್‍ಥ ಇಣಕದಿರಲಿ ನಿತ್ಯವೂ ರಕ್ಕಸದಿ ವರ್‍ತಿಸುವುದು ಕೆಟ...

ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. *****...

೧ ಕೂಸಿಗಂದು ಏನು ಬೇಡ, ತಿಂಡಿ ಗೊಂಬೆ ಮುದ್ದು ಬೇಡ. ಏನೊ ಅರಕೆ, ಏನೊ ಬೇನೆ, ಅತ್ತು ಸೊರಗಿತು : “ಅಮ್ಮ ಎಲ್ಲಿ ಹೋತು” ಎನುತ ಅತ್ತು ಸೊರಗಿತು. ಅಳುವ ಕೇಳಿ ಬಂದ ತಾಯ ಅಮೃತಸ್ಪರ್‍ಶಕಾರೆ ಗಾಯ, ತೊಯ್ದ ಕಣ್ಣ ಬಿಚ್ಚಿ, ಸುಳಿಸಿ, ತೊಂದ...

ಬಾಲಿ ತಾ ಮೈನೆರದು ಬಾಗಿಲದಾಗೆ ನಿಂತಾಳ| ಬಾಳೇಲಿ ಹಂಗ ಮಕ ಬಾಡೇ| ಸೋ ||೧|| ಬಾಳೇಲಿ ಹಂಗ ಮಕ ಬಾಡಿ ಅವರವ್ವಾ| ಬಾ ಬಾಲಿನಂದ ಕರದಾಳ| ಸೋ ||೨|| ರಂಬಿ ತಾ ಮೈಯನೆರದ ಅಂಗಳದಾಗ ನಿಂತಾಳ| ನಿಂಬೆಲಿ ಹಾಂಗ ಮಕ ಬಾಡೇ| ಸೋ ||೩|| ನಿಂಬೀಯ ಎಲೀ ಹಂಗ ಮಗ ಬ...

ಗಾಳಿ ಪ್ರಾಣವಾಯು ಉಸಿರಾಟಕ್ಕೆ ಅಗತ್ಯವಾದ ವಸ್ತು. ಆದರೆ ಗಾಳಿಯಿಂದ ಕುಡಿಯುವ ನೀರನ್ನು ತಯಾರಿಸಬಹುದೆಂದು ಸಿಂಗಪುರಿನ ಹೈಪ್ಲಕ್ಸ್ ಎಂಬ ಸಂಸ್ಥೆ ಎಕ್ಯೋಸಸ್, ಎಂಬ ಸಲಕರಣೆಯ ಸಹಾಯದಿಂದ ಗಾಳಿಯಲ್ಲಿರುವ ನೀರಿನ ಆವಿಯನ್ನು ತಂಪುಗೂಳಿಸಿ ದ್ರವೀಕರಿಸಿ ನ...

ರಾಗ ಬೇಹಾಗ- ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನಮಗಾಗಿ ನರಲೀಲೆಯನಾಂತು! || ಪಲ್ಲ || ಶುಭಜನನಕೆ ಸೆರೆಗತ್ತಲೆಯೊ ಹಿತ ವಾದುದು ೧ಮಂದೆಯ ಗೋದಲೆಯೊ? ೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ? ಯಮುನೆಯೀಸೆ ತಂದೆಯ ತಲೆಯೊ? || ೧ || ಕೊಳಲ ಸೂಸಿ ಹ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...