ನಟ ತೆರೆಯ ಮರೆಯಾದ ಆಟ ತೀರಿಸಿಕೊಂಡು, ಭಟ ಸಮರದಿಂದ ತೆರಳಿದ ಅರಸನರಮನೆಗೆ; ಪಟು ಪಾಡುಗಾರ ತುಟಿ ಮುಚ್ಚಿದನು ನಾಡು- ನುಡಿಗಳ ಹಾಡುಗಳನು ಹಾಡಿ. ಅಟಮಟದ ಮಾತಲ್ಲ; ನಾಡೆ ನಾರಾಯಣನು, ದಿಟವಾಗಿ ‘ನುಡಿಯೆ ಸಿರಿ’ ಎಂದು ಕೀರ್ತನೆಗೈದು ಹಟದಿ ಕೀರ್ತನಗಾರ ಬೆವರನೊರಿಸಲು ಹಿಂದೆ ಸರಿದ ವಿಶ್ರಾಂತಿಗಾಗಿ. ...

ಯಾವ ಜನ್ಮದ ಪುಣ್ಯವೊ ಏನೊ ನಾನಾಗಿಹೆನು ಕನ್ನಡಿಗ ಕವಿ ಕಲ್ಪನೆಯ ಚೆಲುವಿಗು-ಮೀರಿದ ಕಾಣುತಲಿಹೆನೀ ಸಿರಿಸಗ್ಗ ಹನಿಯುತಲಿದೆಯೊ ನವ ಸ್ಫೂರ್ತಿಯ ಮಳೆ ಅಮೃತ ಸಲೆಯಾಗಿ ಹರಿಯುತಲಿದೆಯೊ ಸಾಹಿತ್ಯದ ಹೊಳೆ ಕಲಕಲ ದನಿಯಾಗಿ ಹಾಡುತಲಿದೆಯೊ ಕೋಗಿಲೆಯಾ ಮನ ಸಪ್ತ...

ಅಂದು ಶನಿವಾರ, ಸ್ವಲ್ಪ ಬೇಗನೆ ಪಾಠ ಮುಗಿಸಿ ಮನೆಗೆ ಹೋಗಬೇಕೆ೦ದಿದ್ದೆ. ಹೋಗುವಾಗ ಗೌಡರ ಹತ್ತಿರ ನಾಲ್ಕು ಮಾತು ಆಡಿ ಹೋಗುವದು ದಿನದ ರೂಢಿ. ಆದರೆ ಇಂದು ಗೌಡರೇನೋ ತಮ್ಮೊಬ್ಬ ರೈತನಿಗೆ ಬಾಯಿಮಾಡುತ್ತಿದ್ದರು. ಈರ…. ಆ ರೈತನ ಹೆಸರು…. ...

ಅವ್ವ ನಿನ್ನ ಮಮತೆಯ ತೊಳ್ ತೆಕ್ಕೆಯಲ್ಲಿ ಹುಟ್ಟಿ ಬೆಳೆದವರು ಬೆಳೆಯುತ್ತಾ ಎತ್ತರದುತ್ತರಕ್ಕೆ ಬೆಳೆದರು ನೀ ಉಣಿಸಿದ ಮೊಲೆ ಹಾಲ ಕುಡಿದು ಮತ್ತೇರಿದವರು. ಹಸಿರ ಹೊನ್ನ ಹೊತ್ತಿಗೆಯಲ್ಲಿ ಪವಡಿಸಿ ತಮ್ಮ ಸ್ವಾರ್ಥಕ್ಕಾಗಿ ಕನಸ ಕಾಣ ತೊಡಗಿದವರು ಮರೆತರು ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ರಕ್ಷಣೆ ಇದೆಯೆಂತಲೇ ಅಣಕದ ಮಾತಿನಲ್ಲಿ ಭೂತ ದರ್‍ಶನ ಕುರಿತು ಮಾತನಾಡಿದೆ ನಾನು. ದಿಟ್ಟವೋ ಸೊಟ್ಟವೋ ಒಟ್ಟು ಜನರುಚಿಯಲ್ಲೇ ಎಳ್ಳಷ್ಟೂ ವಿಶ್ವಾಸ ಇಲ್ಲವೆಂದೇ ಅದನ್ನು ಸಾಧಿಸುವ, ಸಂಭಾವ್ಯವೆಂದು ವಾದಿಸುವ ಗೋಜಿಗೇ ನಾ ಹ...

ಪಾತ್ರಗಳು: ವೆಂಕಟಾಚಾರ್ಯರು(೬೫ ವರ್ಷ)- ವೈದ್ಯರು ಪಿಳ್ಳಾರಿ ಗೋವಿಂದ(೩೦ ವರ್ಷ)- ವೆಂಕಟಾಚಾರ್ಯರ ಸಹಾಯಕ ಗೋಪಾಲ(೩೨ ವರ್ಷ)- ರೋಗಿ ಅರುಣ- ಶರಣ(೩೬ ವರ್ಷ)- ದರೋಡೆಕೋರರು ಸುಕ್ಷೇಮ(೪೩ ವರ್ಷ)- ಕಳ್ಳವೇಷದ ಅರುಣ ಸುಕಾಮ(೪೩ ವರ್ಷ)- ಕಳ್ಳವೇಷದ ಶರಣ ...

ಕನಸಿನಲ್ಲಿ ಕಂಡಿದ್ದೆನೊಮ್ಮೆ ಚಲುವತಿಯನ್ನು, ಅವಳೊಂದು ಮೃದುಹಾಸ ನನ್ನ ಮನವನು ಸೇರಿ ಅನುದಿನವು ಸಂಚರಿಸುತಿತ್ತು ಹೆಣ್ಣನು ಸಾರಿ ಆ ನಗೆಯು ಅರಳುವುದ ನೋಡಬೇಕೆಂದೆನ್ನ ಕಣ್ಣುಗಳು ಬಯಸಿದುವು. ಓರ್‍ವ ಬಾಲಕಿಯನ್ನ ಆ ನಗೆಯಲಂಕರಿಸಿಹುದ ನೋಡಿ ಕಳೆಯೇರಿ...

ಓ ತಂದೆ ಶಿವತಂದೆ ಯುಗಯುಗದ ಗುರುತಂದೆ ನಿನ್ನಿಂದಲೇ ಬೆಳಕು ಬೆಳದಿಂಗಳು ಹಾಲು ಸಾಗರ ನೀನೆ ಪ್ರೇಮ ಸಾಗರ ನೀನೆ ನೀನಿಲ್ಲದೀಭುವನ ಬರಿ ತಂಗಳು ಶಾಂತಿ ಸಾಗರ ನೀನು ಪ್ರೀತಿ ಸಾಗರ ನೀನು ನೀ ಸತ್ಯ ಶ್ರೀ ಶಿಖರ ಶ್ರೀಶೈಲವು ಜ್ಞಾನ ಸಾಗರ ನೀನು ಕರುಣ ಸಾಗರ...

ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/ ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ ಗೋಲದ ಮೇಲೆ/ ಬಾತ್ ರೂಮು ಕ್ಲೀನಾಗಿ...

ಯಂಗೀಸ್ರ್ ಔರೆ ಊವ್ ಇದ್ದಂಗೆ- ನಲುಗಿಸ್ ಬಾರ್‍ದು ಔರ್‍ನ! ಒಂದ್ ಚೋಟುದ್ದ ಊವಂತ್ ಅದ್ನ ಒದ್ದೋನ್ ಇಂದ್ರ ಉದ್ದಾರ್ ಆದ್ನ! ಯಂಗೀಸ್ರೌರೆ ಊವಿದ್ದಂಗೆ- ನಲುಗಿಸ್ ಬಾರ್‍ದು ಔರ್‍ನ! *****...

ಯಾರ ಬರುವ ಕಾಯುತಿರುವೆ? ಯಾರ ದೆಸೆಗೆ ನೋಯುತಿರುವೆ? ಯಾರಿಗಾಗಿ ಸಾಯುತಿರುವೆ? ಜೀವ ಜೀವವೇ! ದಿನಬೆಳಗೂ ನಿರುಕಿಸುವೆ, ದೆಸೆದೆಸೆಗೂ ಗಿರುಕಿಸುವೆ, ಮೊಗಮೊಗಗಳ ಪರಕಿಸುವೆ, ಜೀವ ಜೀವವೇ! ಕುಣಿವುದಾವ ಲಯಕೆ ನೀನು? ತುಡಿವುದಾವ ಜಗಕೆ ತಾನು? ಆಸೆ-ಬಸಿರ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...