ಸಮಾದಾನ

ಕುಡದ್ಬುಟ್ಟು ಮೋರೀಲ್ ನಾ ಬಿದ್ಕೊಂಡ್ ಇವ್ನೀಂತ್ ಏಳಿ
ಎಲ್ಲಾರ ನೆಗ್ತಾರೆ ಸುಂಸುಂಕೇನೆ.
ಎಲ್ರಂಗೇ ಮನ್ಸ-ಇವನೇನೋ ಒಸ್ ತಪ್ದಾಂತ
ಅನ್ನಾಲ್ಲ-ಬೆಪ್ಗಳ್ಗೆ ಏನ್ ಏಳಾನೆ ! ೧

ಆಕಾಸ್ದಲ್ ಸೂರ್‍ಯಾವ್ನೆ-ದೊಡ್ಡ್ ಮನ್ಸ-ವಾಸ್ತವ-
ಗ್ರಾಸ್ತ್ನಂತೆ ಅಗಲೆಲ್ಲ ತಿರಗಾಡ್ತಾನೆ;
ಸಂಜೆ ಆಯ್ತ್ ಅಂದರ್‌ ಸಾಕ್- ಪಚ್ಚಿ ಮದೂರಾಚೇಲಿ
ಮಡಗೀರೊ ಪಡಕಾನೇಗ್ ಓಡೋಯ್ತಾನೆ! ೨

ಪಟ್ಟಾಗಿ ಒಡದ್ಬುಟ್ಟು ತೂರಾಡ್ತ ತೂಗ್ತಾನೆ!
ಕಣ್ಗಳ್ನ ಕೆಂಪಿಗ್ ಮಾಡ್ ತೇಲಿಸ್ತಾನೆ!
ನನ್ ಅಣಕ್ಸೊ ನರಮನ್ಸ ಸೂರ್‍ಯನ್ಗೆ ಬಾಯ್ಬುಟ್ಟಿ
ಅದಕಂತೆ ಇದಕಂತೆ ವೋಲೀಸ್ತಾನೆ! ೩

ತೂರಾಡ್ತ ಮೋರೀಗೆ ಮೋಚ್ತಾನೆ ಸೂರ್‍ಯಪ್ಪ-
ಕೆಸರೆಲ್ಲ ಛಿಲ್ಲಂತ ಮೇಲ್ ಆರ್‍ತದೆ!
ಅದಕಂಡು ‘ಕತ್ಲಾತು ಕತ್ಲಾತು’ ಅನ್ಕೊಂಡಿ
ಬೆಪ್ತಕಡಿ ಲೋಕೆಲ್ಲ ಕೂಗ್ ಆಕ್ತದೆ! ೪

ಚಿಕ್ಕೋರ್ ಸಿಕ್ಕೌರಣ್ಣ ಎಲ್ಲಾರ್ ನೆಗಾಕೆ!
ದೊಡ್ಕೋರ್ ಎಂಗಾಡಿದ್ರ ಎಲ್ಲಾನ ಸೈ!
ಲೋಕಾನೆ ಇಂಗೈತೆ-ನಾನ್ ಯಾಕ್ ದುಕ್ಪಡಲಿ-
ಮುನಿಯನ್ಗು ಯೆಂಡಕ್ಕು ಬೋಲೋರೇ ಜೈ! ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಕೆ
Next post ದೃಷ್ಟಿ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…