ಮರಿ ಇಲಿ ಬಂದಿತು ಪರಿಚಯ ಮಾಡಲು ಕೆಂಪು ಕೆಂಪು ಹೊಸ ಗಡಿಗೆಯನು ಅವ್ವನು ಕಂಡು ಕೋಪಿಸಿಕೊಂಡು ಬಿಟ್ಟೇ ಬಂದಳು ಅಡಿಗೆಯನು ಗದೆಯನು ಎತ್ತಿದ ಭೀಮನ ಹಾಗೆ ಹಿಡಿದಳು ಮೂಲೆಯ ಬಡಿಗೆಯನು ಹೊಸ ಹೊಸ ಗಡಿಗೆಯು ಚೂರಾಯ್ತು ಮರಿ ಇಲಿ ಬಿಲದಲಿ ಪಾರಾಯ್ತು! *****...

ಲೀಲಾವತಿಯು ಒಬ್ಬ ಬಡ ಬ್ರಾಮ್ಹಣನ ಮಗಳು. ಅವಳ ತಂದೆಯು ಒಂದು ಅಂಗಡಿಯಲ್ಲಿ ಕಾರಕೂನನನಾಗಿದ್ದನು. ಆತನಿಗೆ ಪಿತ್ರಾರ್‍ಜಿತ ಆಸ್ತಿಯೆಂದರೆ ಒಂದೇ ಒಂದು ಸಣ್ಣ ಬಾಗಾಯತ್ತು. ಹಾಗೂ ಹೀಗೂ ಮನೆಯ ವೆಚ್ಚ ಸಾಗುತ್ತಿದ್ದಿತು. ಬೇರೆಯವರಂತೆ ಚಹಾಫಲಾಹಾರದ ರೂಢಿ...

ಕನ್ನಡ ತಾಯ್ ಹೊನ್ನ ತೇರ ಎಳೆಯ ಬನ್ನಿ ಕನ್ನಡದಾ ಭಾವದೆಳೆಯ ಸಸಿಯ ನೆಡ ಬನ್ನಿ || ವನಸ್ತೋಮಗಣಮತ ಮಾನವತೆಯ ತೆನೆಯ ಬೆಳೆಸಿ ಹಸಿದ ಜೀವಂತ ದಾಳದ ಹಸಿರಾಗ ಬನ್ನಿ|| ವ್ಯೋಮ ಕೂಟವನು ನಿಲ್ಲಿಸಿ ಹಾಲ್ಗಡಲ ಮಥಿಸಿ ಐಕ್ಯ ಭಾವದೆಳೆಯ ಜೀವ ಕೋಟಿ ಮೂರ್ತಉದಿಸ ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ ಮಲೆಗಳಲ್ಲೂ ಇಂಥ ಮೋಹ’ ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು ಮುದುಕ ನುಡಿದನು ಹೀಗೆ ಮನವ. “ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,...

ಆ ಮಧ್ಯೆ ಹೃದಯಾಘಾತವೂ ಆಗಿತ್ತು. Angioplasty ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡೆ. ಯಾರಿಗೂ ತಿಳಿಸಿರಲಿಲ್ಲ. ಒಬ್ಬಳೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದೆ. ನರ್ಸ್‌ಗಳ ಸ್ನೇಹ, ಆಯಾಗಳ ವೈದ್ಯ ಸ್ನೇಹದಿಂದ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡು ಬಂದಿ...

ಹಿಡಿಯಿದನು, ಇದುವೆ ಆ ಕಥೆಯ ತಬ್ಬಲಿಗೊಳಲು. ಗೆಳೆಯನಿದನಾಯ್ದು ತಂದನು ಬನದ ಬಿದಿರು ಮೆಳೆ- ಯೆದುರು ಗಣೆಯಾಗಿರಲು, ಅದ ತಿದ್ದಿ ತೀಡಿ ಕೊಳೆ,- ಒಳಗೆಲ್ಲ ಕಾಣಿಸಿತು ತುಂಬಿ ಬಂದಿಹ ತಿಳಲು. ಅದನು ಕೊರೆಯುತ ಸವರಿ ಹನಿ ಹೆಜ್ಜೆಗಳನಿಡಲು ಹರಿದಿತಿದರೊಳಗ...

ತಾಯ ಪ್ರೀತಿಯ ಹಸ್ತ ನೀಚಾಚಿ ಬಾರಯ್ಯಾ ಓ ಪ್ರೇಮ ಯುಗಶಿಲ್ಪಿ ದೇವದೇವಾ ನೀನೆ ನವಯುಗ ಶಿಲ್ಪಿ ಕಲ್ಪ ಕಲ್ಪದ ಶಕ್ತಿ ಕೇಳು ಮಕ್ಕಳ ಕೂಗು ವಿಶ್ವದೇವಾ ತಾಯಿಯೆಂದರು ನೀನೆ ತಂದೆಯೆಂದರು ನೀನೆ ನೀನಿಲ್ಲದಿನ್ನಾರು ಇಲ್ಲವಯ್ಯಾ ನೀನೆ ಮೌನದ ಮೌನ ನೀನೆ ಭುವನ...

ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ? ಅದು ಆತ...

ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ ನಿಮ್ಮೆದೆಯ ಕದವ ತೆರೆದು ಮಾತಾಡಿಸಿ ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು. ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ, ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ. ನಿ...

ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು; ಮಣ್ಣಿನಲಿ ಅನ್ನವನು ಹುಡುಕುತಿವೆ ಕಣ್ಣುಗಳು; ಇನ್ನುವೂ ಹೂತಿಲ್ಲ ಮನದ ಮೊಗ್ಗು. ಬಾನ ತುಂಬಿದೆ ಶಂಖನಾದ, ತಿರುತಿರುಗುತಿದೆ ಚಕ್ರ, ಬಣ್ಣಗಳಲ್ಲಿ ಬೀರಿ ಪ್ರಭೆ...

ಒಬ್ಬ ಸಾಧಕ ಅತ್ಯಂತ ಶ್ರಮಪಟ್ಟು ಶಾಸ್ತ್ರ ಪುರಾಣಗಳ ಅಧ್ಯಯನ ಮಾಡುತ್ತಿದ್ದ. ಪ್ರಖರವಾದ ಬಿಸಿಲಿನಲ್ಲಿ ನದಿ ದಂಡೆಯಲ್ಲಿ ಕುಳಿತು ಓದುತ್ತಿದ್ದ. ಬಿಸಿಲಿಗೆ ಬೆವರಿನ ಹನಿಗಳು ಮೂಡಿದಾಗ ಓದಿದ ಪುಟಗಳ ಹಾಳೆಯನ್ನು ಹರಿದು ಬೆವರು ಒರಸಿ ನದಿಗೆ ಎಸೆಯುತ್ತ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...