ಕನ್ನಡ ತಾಯ್ ಹೊನ್ನ
ತೇರ ಎಳೆಯ ಬನ್ನಿ
ಕನ್ನಡದಾ ಭಾವದೆಳೆಯ
ಸಸಿಯ ನೆಡ ಬನ್ನಿ ||
ವನಸ್ತೋಮಗಣಮತ
ಮಾನವತೆಯ ತೆನೆಯ ಬೆಳೆಸಿ
ಹಸಿದ ಜೀವಂತ ದಾಳದ
ಹಸಿರಾಗ ಬನ್ನಿ||
ವ್ಯೋಮ ಕೂಟವನು ನಿಲ್ಲಿಸಿ
ಹಾಲ್ಗಡಲ ಮಥಿಸಿ
ಐಕ್ಯ ಭಾವದೆಳೆಯ ಜೀವ
ಕೋಟಿ ಮೂರ್ತಉದಿಸ ಬನ್ನಿ||
ಮನ ಮರ್ಮತೆಯ
ಬಿಗುಮಾನ ಬತ್ತಳಿಕೆಯ
ಅಭಿಮಾನದಿಂ ಮುರಿದೊಳೆದು
ದೈ ನ್ಯತೆಯ ಸ್ವರವಾಗಿ ಬನ್ನಿ||
ಮಹೋನ್ನತದಾಸೆರೆಯಲಿ
ಪಥವೇರಿನಿಂದು ಪ್ರೇಮ
ಕೆಳೆಯ ವಸುಂಧರೆ
ದೀವಿಗೆಯ ಕಿರಣರಾಗ ಬನ್ನಿ||
*****