ಮರಿ ಇಲಿ ಬಂದಿತು ಪರಿಚಯ ಮಾಡಲು ಕೆಂಪು ಕೆಂಪು ಹೊಸ ಗಡಿಗೆಯನು ಅವ್ವನು ಕಂಡು ಕೋಪಿಸಿಕೊಂಡು ಬಿಟ್ಟೇ ಬಂದಳು ಅಡಿಗೆಯನು ಗದೆಯನು ಎತ್ತಿದ ಭೀಮನ ಹಾಗೆ ಹಿಡಿದಳು ಮೂಲೆಯ ಬಡಿಗೆಯನು ಹೊಸ ಹೊಸ ಗಡಿಗೆಯು ಚೂರಾಯ್ತು ಮರಿ ಇಲಿ ಬಿಲದಲಿ ಪಾರಾಯ್ತು! *****...

ಕನ್ನಡತನವು ನಮಗಿರಲು ಹರಿವುದು ಆನಂದದ ಹಾಲ್ಗಡಲು ಕನ್ನಡತನವು ನಮಗಿರಲು ಅದುವೇ ಸಂತೋಷದ ಹೊನಲು|| ಕನ್ನಡತನದ ಹಿರಿಮೆಯಲಿ ಕಾನನದೊಳಗಣಾ ಮೃಗ ತೃಷ್ಣೆ ಹಸಿರೇ ಉಸಿರಾಗಿಹ ನೆಲಜಲ ಸುತ್ತಣ ಗಿರಿಶೃಂಗಚಿತ್ತ ಲೀಲೆ|| ಕನ್ನಡತನದ ಗರಿಮೆಯಲಿ ಮಾನಸ ಬಿತ್ತರದ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ! ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ ಚಾಟಿಯಿಂದ ಥಳಿಸುವ. ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ ಹಾರಲಿ! ತಿರುಕರಿದ್ದ ಜಾಗವೀಗ ಅದಲು ಬದಲು ಆಗಿದೆ, ಚಾ...

ಹಾಗೆಯೇ… ಸಂಗೀತವೆಂದರೆ ನನಗೆ ಪ್ರಾಣ. ಅದೂ ಹಳೆಯ Sorrowfull ಹಾಡುಗಳೆಂದರೆ ನನಗೆ ಇಷ್ಟವಾಗುತ್ತಿತ್ತು. ಅವುಗಳಲ್ಲಿ ಎಲ್ಲವನ್ನೂ ಸೆಳೆಯುವ ಮಾಧುರ್ಯವಿರುತ್ತದೆ. ಹಗಲು ನಾನು ಹಾಡು ಕೇಳುವ ಹಾಗಿರಲಿಲ್ಲ. ಅದು ಅವನಿಗೆ ಸಹ್ಯವಾಗುತ್ತಿರಲಿಲ್...

ತೋಳ ಬಂದಿತು ತೋಳ ಹುಲಿಯ ಚರ್‍ಮವ ಹೊದ್ದು, ಸುಭಗಾಕೃತಿಯ ಮಾನಿಸನ ರೂಪವನು ತಳೆದು ಶೀಲ ಸಭ್ಯತೆಗಳಲಿ ಉಚಿತವಾಗಿಯೇ ಬೆಳೆದು, ತೋಳ ಬಂದಿತು ತೋಳ ಮನುಜಾಕೃತಿಯ ಕದ್ದು! ಅತಿಥಿಸತ್ಕಾರದಿಂದಾದರಿಸಿದೆನು ಎದ್ದು, ನಯವಿನಯದಿಂದದರ ವಾದದ್ವಯವನು ತೊಳೆದು. ನ...

ಜಾತಿ ಜಂಗಮ ಸಾಕು ಜ್ಯೋತಿ ಜಂಗಮ ಬೇಕು ಲಿಂಗ ತತ್ತ್ವದ ಬೆಳಕು ಕಾಣಬೇಕು ಕೋತಿ ಭಾವನೆ ಸಾಕು ನೀತಿ ಜೀವನ ಬೇಕು ವಿಶ್ವ ಜಂಗಮ ದೀಪ ಬೆಳಗಬೇಕು ಶಬ್ದದಾಚೆಗೆ ಸಾಗು ಅರ್‍ಥದಾಚೆಗೆ ಹೋಗು ಶಬ್ದಾರ್‍ಥ ಗಡಿಯಾಚೆ ಅರುಹು ಚಾಚು ದೇಹ ಢಂಗುರ ದಾಟು ಆತ್ಮ ಡಿಂಢ...

ಶಿವಾಪುರಕ್ಕೆ ಹೋಗಬೇಕು ಎನ್ನುವ ತುಡಿತ ಹಳೆಯದು. ಪ್ರತಿ ಬಾರಿ ಅಲ್ಲಿಗೆ ಹೋಗುವ ಪಯಣವು ಕೊಡುವ ಅರಿವು ಆನಂದಗಳೇ ಬೇರೆ ಅಂತ ಬಲ್ಲವರು ಹೇಳುವುದನ್ನು ಕೇಳುತ್ತಾ ಶಿವಾಪುರಕ್ಕೆ ಹೋಗುವ ಕನಸು ಕೆನೆಗಟ್ಟುತ್ತಿತ್ತು. ಅಲ್ಲಿಗೆ ಹೋಗಲೆಂದು ಇದ್ದಬದ್ದ ಮ್...

ನಾನ್ ಸಂಪಾದ್ಸಿದ್ ಬಿಡಕಾಸೆಲ್ಲ ಬೆಳ್ಳಿ ರೂಪಾಯಾದ್ರೆ- ಕೊಂಡ್ಕೊಳ್ಳೋದ್ ಒಂದ್ ಯೆಂಡದ್ಬುಂಡೆ ನೂರಾರ್‌ ಬುಂಡೆ ಆದ್ರೆ- ೧ ಬಾಯಿ ವೊಟ್ಟೆ ಎಲ್ಲ ನಂಗೆ ಎಚ್ಚ್ಕೊಂಡ್ ಐನೂರಾದ್ರೆ- ನನ್ ಜರ್‍ಬೇನು! ನನ್ ಸೋಕೇನು! ಆಗ್ ನನ್ ನೋಡಬೇಕಾದ್ರೆ! ೨ ಆಗೋಕಿಲ್...

ತೊಗಲ ನಾಲಗೆ ನಿಜವ ನುಡಿಯಲೆಣಿಸಿದರೆ, ತಾ- ನಂಗೈಲಿ ಪ್ರಾಣಿಗಳ ಹಿಡಿಯಬೇಕು. ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು ಉರಿಯ ನಾಲಗೆಯಿಂದ ನುಡಿಯಬೇಕು. ಸುಡುಗಾಡಿನಲಿ ಹುಡುಗ ಹೆಣವಾದರೇನು? ಕೈ- ಹಿಡಿದವಳು ಹೊಲೆಯನಾಳಾದರೇನು ? ಸಿಲುಬೆಯಲ್ಲೊಡಲು, ವಿ...

ಒಬ್ಬ ಸಾಧಕ ದೈವವನ್ನು ಹುಡುಕಿ ಹೊರಟಿದ್ದ. ದಾರಿಯಲ್ಲಿ ಪೂಜಾರಿ ಸಿಕ್ಕ. ಪೂಜಾರಿಯ ಹತ್ತಿರ ಕೇಳಿದ- “ದೈವ ಎಲ್ಲಿದೆ?” ಎಂದು. “ಅದು ಮಂದಿರದಲ್ಲಿ ಇರುವ ವಿಗ್ರಹದಲ್ಲಿ”- ಎಂದ. ಸಾಧಕನಿಗೆ ಉತ್ತರ ತೃಪ್ತಿ ಕೊಡಲಿಲ್ಲ. ಮುಂದೆ ಹೋಗುತ್ತ-ಒಬ್ಬ ...

ಮಸಣಕೊಯ್ದ ಹೆಣವಿದನು ಸುಟ್ಟು ಕಳೆಯೆಂದು ಮಾರುಕಟ್ಟೆಗೊಯ್ದ ಕೃಷಿ ಸರಕುಗಳನವಗಣನೆ ಮಾಡುತಲಿ ಬೆಳೆದಿಹರೆಮ್ಮ ವರ್‍ತಕರು ಮಸಣವಾಸಿಗಳವರು ಮಾರಿದಾ ಹೊಲಸು ಮ್ಹಾಲನು ತಿನುವರಲಾ ನಗರವಾಸಿಗಳು – ವಿಜ್ಞಾನೇಶ್ವರಾ *****...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...