ಕನ್ನಡತನವು ನಮಗಿರಲು
ಹರಿವುದು ಆನಂದದ ಹಾಲ್ಗಡಲು
ಕನ್ನಡತನವು ನಮಗಿರಲು
ಅದುವೇ ಸಂತೋಷದ ಹೊನಲು||

ಕನ್ನಡತನದ ಹಿರಿಮೆಯಲಿ
ಕಾನನದೊಳಗಣಾ ಮೃಗ ತೃಷ್ಣೆ
ಹಸಿರೇ ಉಸಿರಾಗಿಹ ನೆಲಜಲ
ಸುತ್ತಣ ಗಿರಿಶೃಂಗಚಿತ್ತ ಲೀಲೆ||

ಕನ್ನಡತನದ ಗರಿಮೆಯಲಿ
ಮಾನಸ ಬಿತ್ತರದ ಬತ್ತಳಿಕೆ
ತುಂಬಿಹುದು ಜೀವ ಜೀವನದಾ
ಬಾನಂಚಿನ ಶೃ೦ಗಾರದ ಲೀಲೆ||

ಕನ್ನಡತನದಾ ಸಿರಿಯಲಿ
ನಯನ ಮನೋಹರ ಬೆಳದಿಂಗಳು
ಕಣ್ ಸೆಳೆಯುವ ಆ ನೋಟ
ಕನ್ನಡ ತಾಯಿಯ ಮಕ್ಕಳಕೂಟವು
*****