ಒಬ್ಬ ಸಾಧಕ ಅತ್ಯಂತ ಶ್ರಮಪಟ್ಟು ಶಾಸ್ತ್ರ ಪುರಾಣಗಳ ಅಧ್ಯಯನ ಮಾಡುತ್ತಿದ್ದ. ಪ್ರಖರವಾದ ಬಿಸಿಲಿನಲ್ಲಿ ನದಿ ದಂಡೆಯಲ್ಲಿ ಕುಳಿತು ಓದುತ್ತಿದ್ದ. ಬಿಸಿಲಿಗೆ ಬೆವರಿನ ಹನಿಗಳು ಮೂಡಿದಾಗ ಓದಿದ ಪುಟಗಳ ಹಾಳೆಯನ್ನು ಹರಿದು ಬೆವರು ಒರಸಿ ನದಿಗೆ ಎಸೆಯುತ್ತಿದ್ದ. ಸಂಜೆಯಾಗುವುದರೊಳಗೆ ಶಾಸ್ತ್ರ ಪುರಾಣಗಳ ಹಾಳೆಗಳೆಲ್ಲಾ ನದಿಯಲ್ಲಿ ತೇಲಿ ದಡ ಮುಟ್ಟಿದವು. ಸಾಧಕ ಮಾತ್ರ ಅಲ್ಲೇ ದಡದಲ್ಲಿ ಚಲನೆ ಇಲ್ಲದೆ ಬೆವರಹನಿಯಲ್ಲಿ ಆವಿಯಾಗಿದ್ದ. ಪ್ರವಾಹದೊಂದಿಗೆ ಸೇರಿ ಕಸಕಡ್ಡಿ ಪುರಾಣದ ಹಾಳೆ ದಡ ಮುಟ್ಟಿತು. ಸಾಧಕ ಮಾತ್ರ ಮುನ್ನಡೆ ಇಲ್ಲದೆ ಅಲ್ಲೇ ಮಂಡಿಸಿದ್ದ.
*****