ಹಿಡಿಯಿದನು, ಇದುವೆ ಆ ಕಥೆಯ ತಬ್ಬಲಿಗೊಳಲು.
ಗೆಳೆಯನಿದನಾಯ್ದು ತಂದನು ಬನದ ಬಿದಿರು ಮೆಳೆ-
ಯೆದುರು ಗಣೆಯಾಗಿರಲು, ಅದ ತಿದ್ದಿ ತೀಡಿ ಕೊಳೆ,-
ಒಳಗೆಲ್ಲ ಕಾಣಿಸಿತು ತುಂಬಿ ಬಂದಿಹ ತಿಳಲು.
ಅದನು ಕೊರೆಯುತ ಸವರಿ ಹನಿ ಹೆಜ್ಜೆಗಳನಿಡಲು
ಹರಿದಿತಿದರೊಳಗಿಂದ ಗಾನದಿನದನಿಯ ಹೊಳೆ.
ಕೊಳಲ ನುಡಿಸಲು ಗೆಳೆಯ ಮೆಲುಮೆಲನೆ ಪ್ರೀತಿಮೊಳೆ-
ವಂತೆಲ್ಲರೆದೆಯಾಳದಲಿ, ಹಿಗ್ಗಿ ತಿಡಿ ಹೊಳಲು!
ಒಂದೆರಡು ವರುಷಗಳ ಮೇಲೆ ಕುಗ್ಗಿತು ಕೊರಲು,
ಒಲಿಯದಾ ಚೆಲುವೆಯಲ್ಲೊಸೆದ ಸಖ ಕಣ್ಣಿನಲಿ
ಒಗುಮಿಗುವ ಶೋಕವನು ಮುರಲಿಯಲಿ ಹರಿಸಿದನು.
ಅವನ ದೇಹವದೀಗ ಬೂದಿಯಿರೆ ಮಣ್ಣಿನಲಿ-
ಕಾಣದಿದೆ ಈ ಕೊಳಲು ತನ್ನ ನುಡಿಸಿದ ಬೆರಳು.
ಮಂತ್ರಿಸಿದ ಕೊಳಲಯ್ಯ! ಎಚ್ಚರದಿ ನುಡಿಸಿದನು.
*****