೧ ಹಾ! ಇನ್ನು ದೂರಮಾದೆಯ ನನಗೆ ಸಂತತಂ ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!* ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ- ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ; ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು ನೀರನೂ ಬಿಡದೆ ಹೀರುವೆನೆಂಬ ಪೂಣಾಂತು ಜಗವ ಸುಡುತಿದ್ದರೂ ಭಾಸ್ಕರನು-ಮೃಗಜಂತು ತರುರಾಜಿ ಸರ್ವಮುಂ ಇರೆ ಬಿಸಿ...

ಅಗಲಿದ ಇಷ್ಟಪಾತ್ರರನ್ನು ನೆನಪಿಸಿಕೊಳ್ಳುವುದು ಯಾತನೆಯ ಸಂಗತಿಯೂ ಹೌದು; ಹಿತ ಅನುಭವವೂ ಹೌದು. ಯಾತನೆಗೆ ಕಾರಣ ಅವರು ನಮ್ಮೊಂದಿಗಿಲ್ಲ ಎನ್ನುವುದು. ಅವರ ನೆನಪು ಮನಸ್ಸನ್ನು ಆರ್ದ್ರಗೊಳಿಸುವುದು ಹಿತ ಅನುಭವಕ್ಕೆ ಸಂಬಂಧಿಸಿದ್ದು. ಆರ್ದ್ರತೆಯ ಈ ಆನ...

ಯುಗಾದಿಗೆ ಗಿಡಬಳ್ಳಿಗಳು ಚಿಗುರುವಾಗ ಮೊಗ್ಗುಗಳು ಬಿರಿಯುವಾಗ ಕ್ಯಾಮರೀಕರಿಸಿಕೊಳ್ಳಲು ರೀಲ್ ತಂದು ಕ್ಯಾಮರಾ ಸೆಟ್ ಮಾಡಿಟ್ಟಿದ್ದೆ. ಮಗ ಕಾಲೇಜ್ ಡೇ ಗೆಂದು ಹೋಗಿ ಒಂದೂ ರೀಲ್ ಉಳಿಸದೆ ಇದ್ದದ್ದನ್ನೆಲ್ಲಾ ಕ್ಲಿಕ್ಕಿಸಿಕೊಂಡು ಬಂದು ಬಿಟ್ಟ. ಫೋಟೋಗಳು...

ತಂದಿಹೆಯ ತಕ್ಕಡಿಯ ತೂಗುವುದಕೆ? ಭೂಮಿ ಆಕಾಶಗಳು ಸಾಲವಿದಕೆ. ಚಾಚಿಹೆಯ ನಾಲಿಗೆಯ ಸವಿಯುವುದಕೆ? ಒಂದಲ್ಲ, ಎರಡಲ್ಲ ನುಂಗುವುದಕೆ. ಮಾಡಿಹೆಯ ಲೆಕ್ಕವನು ತಿಳಿಯುವುದಕೆ? ದಾಟಿಹುದು ಸಂಖ್ಯೆಗಳ ಲೆಕ್ಕವೇಕೆ? ನೀಡಿಹೆಯ ಕರಗಳನು ಹಿಡಿಯುವುದಕೆ? ಗೋಳವಿದು ...

ಎಂಥ ಗೋಪೀ ಕಣ್ಣೊಳೆಂಥ ಶಾಂತಿ! ಕೆನೆ ಹಾಲು ಮೈ ಚಿನ್ನ, ಸೂರ್ಯಕಾಂತಿ ಹಾಲು ಗಡಿಗೆಯ ಹೊತ್ತು ತಲೆಯ ಮೇಲೆ ಸೆರಗಿಳಿಸಿ ಬೆಡಗಲ್ಲಿ ಹೆಗಲ ಮೇಲೆ ಮುಡಿದ ಮಲ್ಲಿಗೆ ಕಂಪ ಸುತ್ತ ಹರಡಿ ನಡೆಯುವಳು ನನ್ನ ನೆಮ್ಮದಿಯ ಕದಡಿ ನಡಿಗೆಯೇ ನೃತ್ಯವಾದಂಥ ಹೆಣ್ಣು ಕಲ...

ಸಿನಿಮಾ ಮುಗಿದು ನಾಯಕ ತನ್ನ ಹೋಟೇಲಿಗೆ ಮರಳಿದಾಗ ಸಾಧಾರಣ ಒಂದೂವರೆ ಗಂಟೆಯಾಗಿರಬಹುದು. ಅವನ ವಾಚು ಕೆಟ್ಟುಹೋಗಿತ್ತು. ಹೋಟೇಲು ಕಾಂಪೌಂಡಿನ ಉಕ್ಕಿನ ಗೇಟು ತುಸುವೆ ತೆರೆದಿತ್ತು. ಬದಿಗೆ ಗೂಡಿನಲ್ಲಿ  ಕುಳಿತಿದ್ದ ಕಾವಲಿನವ ತೂಕಡಿಸುತ್ತಿದ್ದ. ತೂಕಡ...

ಹೊಳೆ ನೀರು, ಹಳ್ಳದ ನೀರು, ಕೆರೆ ನೀರು, ಕೊಳ್ಳದ ನೀರು, ಬಾವಿ ನೀರು, ನಲ್ಲಿ ನೀರು, ಚರಂಡಿ ನೀರು, ಬರ್ಫು ನೀರು, ಸಮುದ್ರ ನೀರು, ನಿಂತ ನೀರು, ಎಲ್ಲಾ ನೀರೆಯರು ರುಚಿ ಶುಚಿ ಪಾವಿತ್ರ್‍ಯತೆ ಇಂತಿಂತಿಷ್ಟೆ. *****...

ಬೆಳಗಾಗೆದ್ದರೆ ಬೆಳಗ್ಗೇ ಫೂ ಫೂ ಮಧ್ಯಾನ್ನಾದರೆ ಮಧ್ಯಾನ್ನ ಫೂ ಫೂ ಮಧ್ಯಾನ್ನ ಮೇಲೆ ಸಂಜೆಗು ಘೂ ಘೂ ಆಚೆಗೆ ಫೂ ಫೂ ಈಚೆಗೆ ಫೂ ಫೂ ಎಲೆಯಡಿಕೆಯಜ್ಜನಿಗೆ ಪುರುಸೊತ್ತೆ ಇಲ್ಲ ಮರವ ಕಂಡರೆ ಮರಕ್ಕೆ ಫೂ ಫೂ ಗಿಡವ ಕಂಡರೆ ಗಿಡಕ್ಕೆ ಫೂ ಫೂ ಮಡಿಕೆಗು ಫೂ ಫೂ...

ದೇವರ ಸತ್ಯವು ಊರಲಿ ಹರಡಿತು ಬಂದರು ಭಕ್ತರು ತಮತಮಗೆ | ಹೂವನು ಕಾಯನು ಹಣ್ಣನು ಜೋಡಿಸಿ ತಂದರು ಹರಕೆಯ ಬೇಡಲಿಕೆ. ದೇವರ ಮಹಿಮೆಯು ಹೆಚ್ಚಾಗಿರುವುದು ಕಿರುಗುಡಿ ಬಾಗಿಲು ಬಿಗಿದಿಹುದು | ದೇವರ ನೋಡಲು ಕಂಡಿಗಳಿರುವುವು ಕಿರುಬಾಗಿಲ ಬೆಳಕಂಡಿಗಳು. ಬಂದ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...