ಗುರ್‍ ಅಂತೀನಿ ಹುಲಿಯಲ್ಲ
ಜೋರಾಗ್ ಓಡ್ತೀನ್ ಮೊಲವಲ್ಲ.
ದುಡ್ಡಿದ್ರೆ ನಾ ಸಿಗ್ತೀನಿ
ಔಟ್‌ಹೌಸಲ್ಲೆ ಇರ್‍ತೀನಿ

ನಿನಗೋ ಎರಡೇ ಕಣ್ಣುಗಳು
ನನಗೋ ಎರಡಿವೆ ಬೆನ್ನಲ್ಲೂ
ರೆಪ್ಪೆಯೆ ಇಲ್ಲದ ಕಣ್ಣುಗಳು
ಸ್ವಿಚ್ಚನು ಒತ್ತಲು ಹೊಳೆಯುವುವು

ಪ್ರಾಣಿಯ ಹಾಗೇ ಕಾಲುಗಳು
ಆದ್ರೂ ಇಲ್ಲ ಬಾಲ,
ನಾ ಯಾರೂಂತ ಗೊತ್ತಾಯ್ತ?
ನೋಡ್ತೀನ್ ಹೇಳೇ ಶೀಲಾ
*****