
ಓ ದೇವಿ ಭಾರತೀಯೆ ನಮಿಸುವೆವು ನಿನಗೆ || ಧವಳಗಿರಿ ಹಿಮಾಲಯ ಶುಭ್ರಹಾಸನ ರುದ್ರ ವೀಣೆ ನಿನ್ನ ನಗೆ ಚೇತನ ನವನವೀನತೆಯ ವಿನೂತನ || ಹೃತ್ಪೂರ್‍ವಕ ಹೃಮ್ಮಾನಕ ನವ ವಿಶಾಲ ಹೃದಯ ಸಾಮ್ರಾಜ್ಞಿ ನಿನ್ನ ಚರಣಕೆ ನಮ್ಮ ನಮನ ಪರಮ ಪಾವನೆ ಧನ್ಯ ಜೀವನ || ನೂಪೂರ...
ಮಿಂಚಿ ಚಕಮಕ, ಬಾಗಿ ತೂಗುತ ಮಣಿದು ಬಳಕುತ ತಡೆದಿದೆ ಕಾಮಬೆಟ್ಟದ ಪಚ್ಚೆ ಹೃದಯದಿ ಏನು ನುಸುಳುತ ನಡೆದಿದೆ ನಯನ ನಿಗಿನಿಗಿ ಎದೆಯ ದೃಢಪಡೆ ಏನೊ ನಾತವ ಹಿಡಿದಿದೆ ಕಳ್ಳಹೆಜ್ಜೆಯ ಮೆಲ್ಲನಡಿಗೆಯ ಘಾತಸಂಭ್ರಮ ಪಡೆದಿದೆ ಎಲೆಯ ಸಂದಿಗಳಿಂದ ಜಳಕನೆ ಹರಿದ ಮರ್...
ಏನೇ ತಲೆಗೂ ಮೀಸೆಗೂ ಬಣ್ಣ ಹಚ್ಚಿಕೊಂಡರೂ| ಒಳ ಮನಸ್ಸೇಳುತಿದೆ ದೇಹಕೆ ವಯಸ್ಸಾಗಿದೆ ಎಂದು! ಆದರೂ ಹೇಳದೆ ಕೇಳದೆ ನಡೆದಿದೆ ಒಂದೇ ಸಮನೆ ಒಪ್ಪದ ಮನಸನು ಒಪ್ಪಿಸುವ ಕಾರ್‍ಯವಿಂದು || ಯಾಕೋ ಎಲ್ಲಾ ಟೀನೇಜು ಹುಡುಗ ಹುಡುಗಿಯರಿಂದ ಅಂಕಲ್ ಎಂದು ಕರೆಸಿಕೊಳ...
ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು ಲೋಕದೀ ಬೊಕ್ಕಸವ ತುಂಬುತಿಹುದು. ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು ಬರುವ ಗಂಗೆಯ ಕರೆದು ಮನ್ನಿಸುವುವು. ಆಗಸಕು ಭೂಮಿಗೂ ಬಾಂಧವ್ಯವನ್ನು ಬೆಳೆಸಿ ಮಣ್ಣೊಳಿಹ ಸತ್ವಗಳ ತೆಗೆದು ಸೂಸಿ; ಧನ್ಯರಾವ...
ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು ದಾರಿ ಸಾಗುವುದೆ ಒಳ್ಳೆಯದು ಎಲ್ಲಿಯೂ ನಿಲ್ಲದೆ ಏನನೂ ಕಾಣದೆ ಧಾವಿಸುವುದೇ ತಲ್ಲಣ ಕೆರೆಯ ನೋಡುವುದು ಕೊಳವ ನೋಡುವುದು ಜಲಾಶಯದ ಬಳಿ ತಂಗುವುದು ಗಿರಿಯನೇರುವುದು ಕಣಿವೆಯನಿಳಿಯುವುದು ಬಳಸು ದಾರಿಗಳಲ್ಲಿ ಸರಿಯುವು...
ಕವಿತೆಯೆಂದರೇ ವಿಸ್ಮಯ ಎಂದರು ಕೆಲವರು ಈ ಬದುಕು ಅದಕ್ಕಿಂತ ವಿಸ್ಮಯ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಒಂದು ಪದವೋ ವಾಕ್ಯವೋ ಕೈ ಹಿಡಿದರೆ ಮಾತು ಬೆಳಕಾದರೆ ಒಂದು ಕವಿತೆ ಈ ಬದುಕೋ ಕ್ಷಣ ಬಿಡದಂತೆ ಕೈ ಹಿಡಿದು ದರದರ ಎಳೆದು ಆಕಾಶಕ್ಕೋ ಪಾತಾಳಕ್ಕೋ ಎಸೆ...
ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ ಇವರು ತಲವಾರಗಳನ್ನು ಹಿಡಿದಿದ್ದಾರೆ ಕಿಚ್ಚು ಹಾಯಿಸುವ ಹಬ್ಬದಲಿ ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ! ‘ಅಲ್ಲಾ’ ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ ‘ರಾಮ’ ಎಂದರೆ ಇಲ್ಲ...
ಕೇಳಿರೈ ಸಭಾ ಬೆನ್ನೆಲವುಗಳೇ ತಮಗೆದೆಗಾರ್‍ಕಿದ್ದೊಡೆ ಎನ್ನ ಕಾವ್ಯವಂ ಮನದಲಿ ಪಠಿಸಿರೈ ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ ನಿನ್ನ ಕಾವ್ಯದಲ್ಲೇನಿಹುದು? ಮೈ ಮುಚ್ಚುವುದೋ? ಉದರ ತುಂಬುವುದೋ ಮೈ ಮೇಲಿನ ಆಭರಣವಾಗುವುದೋ ನೀ ನುಡಿಯದಿರು ಅಹಂನಲಿ ಹ...
ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ ಕರಗಿ ಓಡುತ್ತಿರುವ ಸಂವತ್ಸರದ ಸುಖದ ಕೊಡುಗೆಯಾಗಿದೆ ಈಗ! ಎಷ್ಟು ಜಡಗಟ್ಟಿದೆ, ಎಂಥ ಕತ್ತಲೆ ಕಾಲ ಕಂಡೆ! ಮುದಿ ಫಾಲ್ಗುಣದ ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ ಚೈತ್ರ-ಕಾರ್ತಿಕ ಅವಧಿ ಮಧುವಸಂತನ ಸಿರಿಯ ತ...













