ಕವಿತೆಯೆಂದರೇ ವಿಸ್ಮಯ ಎಂದರು ಕೆಲವರು
ಈ ಬದುಕು ಅದಕ್ಕಿಂತ ವಿಸ್ಮಯ
ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಒಂದು
ಪದವೋ ವಾಕ್ಯವೋ ಕೈ ಹಿಡಿದರೆ ಮಾತು
ಬೆಳಕಾದರೆ ಒಂದು ಕವಿತೆ ಈ ಬದುಕೋ
ಕ್ಷಣ ಬಿಡದಂತೆ ಕೈ ಹಿಡಿದು ದರದರ ಎಳೆದು
ಆಕಾಶಕ್ಕೋ ಪಾತಾಳಕ್ಕೋ ಎಸೆದು ನಿರ್‍ಲಿಪ್ತ
ವಾಗಿ ಮುಂದೆ ನಡೆದು ಇನ್ನಾರದೋ
ಕೈ ಹಿಡಿದೆಳೆಯುತ್ತಿರುವುದನ್ನು
ಕಂಡೂ ಬದುಕುವುದಿದೆಯಲ್ಲಾ
ಇದರ ಮುಂದೆ ಕಾವ್ಯ ಏನು ಮಹಾ
*****