ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ
ಇವರು ತಲವಾರಗಳನ್ನು ಹಿಡಿದಿದ್ದಾರೆ

ಕಿಚ್ಚು ಹಾಯಿಸುವ ಹಬ್ಬದಲಿ
ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ!

‘ಅಲ್ಲಾ’ ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ
‘ರಾಮ’ ಎಂದರೆ ಇಲ್ಲೇ ನರಕದಲ್ಲಿ ಉಳಿಸುತ್ತಾರೆ!
*****
ಗುಜರಾತ್‌ಗೆ ಕವಿ ಸ್ಪಂದನ