ತ.ರ.ಸು ಕಾದಂಬರಿಗಳಾಧರಿತ ಚಲನಚಿತ್ರಗಳು

Published on :

ಸಿನಿಮಾ ಒಂದು ಅದ್ಭುತವಾದ ಕಲೆ. ಎಂಥವರನ್ನೂ ತನ್ನತ್ತ ಆಕರ್ಷಿಸುವ ಅಪಾರ ಸಾಮರ್ಥ್ಯ, ಅದ್ವಿತೀಯ ಶಕ್ತಿಯನ್ನು ಪಡೆದಿರುವ ಪ್ರಬಲ ಮಾಧ್ಯಮವೆಂದರೆ ಅತಿಶಯೋಕ್ತಿಯಾಗಲಾರದು. ೧೯೩೧ರಲ್ಲಿ ನಿರ್ಮಿಸಿದ ‘ಆಲಂಆರಾ’ ಮೊತ್ತಮೊದಲ ಟಾಕಿ ಚಿತ್ರವಾಗಿ ಅತ್ಯಂತ ಯಶಸ್ಸಿನ ಹಾದಿಯಲ್ಲಿ ಸಾಗಿ ಟಾಕಿ ಚಿತ್ರಗಳ ಯುಗವನ್ನೇ ನಮ್ಮ ಮುಂದೆ ತೆರೆದಿಟ್ಟಿತು. ಇದು ಮುಂಬೈ ಮಾತಾಯಿತು. ಕನ್ನಡದಲ್ಲಿ ಟಾಕಿ ಚಿತ್ರ ಒಂದು ಬರಲು ಮತ್ತೆ ಮೂರು ವರ್ಷ ಕಾಯಬೇಕಾಯಿತು. ೧೯೩೪ರಲ್ಲಿ ಕನ್ನಡದ ಪ್ರಪ್ರಥಮ ವಾಕ್ಚಿತ್ರವು ‘ಸತಿ ಸುಲೋಚನಾ’ ತೆರೆಕಂಡಿತು. […]

ಅನುಕರಣೆ

Published on :

ಮಕ್ಕಳು ಟಾಟಾ ಎನ್ನುವುದ ಕೇಳಿ ಕಾಗೆಗಳು ಕಾಕಾ ಎನ್ನುತ್ತವೆ ಕೆಲವರು ಬೈ ಬೈ ಎನ್ನುವದ ಕೇಳಿ ನಾಯಿಗಳು ಬೌ ಬೌ ಎನ್ನುತ್ತವೆ ಮತ್ತೆ ಕೆಲವರು ಚೀರಿಯೋ ಎನ್ನುವುದ ಕೇಳಿ ಹಕ್ಕಿಗಳು ಚಿಲಿಪಿಲಿ ಗುಟ್ಟತ್ತವೆ. *****

ಕಾಡುಬೆಳದಿಂಗಳು

Published on :

ಅಂತರಾಳ ಬೇರುಗಳ ಭಾವಸ್ಪರ್ಶಕೆ ಸಹ್ಯಾದ್ರಿಯ ತುಂಬೆಲ್ಲ ಹಸಿರು. ಎಣ್ಣೆ ಹಚ್ಚಿ ಎರೆದ ಮಿರುಗು ಗತ್ತಿನ ಮಾತು ವಯ್ಯಾರ ಗಗನ ಚುಂಬಿಸುವ ಹಂಬಲ. ನೂರು ಸಾವಿರ ಮಾತುಗಳ ಒಳಗೊಳಗಿನ ಚಡಪಡಿಕೆಗೆ ಮೌನ ಆದರೂ ಎಷ್ಟೊಂದು ಸ್ಪಷ್ಟ ಕಡಲ ನೆರೆತೊರೆ ಏರುಬ್ಬರ ಎಷ್ಟೊಂದು ತಿಳಿ ಒರತೆಯನೀರು ಪಚ್ಚೆ ಹಸಿರು ಹೊಳೆವ ಕಣ್ಣಿನ ಈ ಸಹ್ಯಾದ್ರಿ ಕುಸುಮ ಮಾಲೆ. ಮಾಗಿ ಚಳಿ ಮಂಜು ಮುಸುಕು ಬಿರುಸಿನ ಓಡಾಟದ ಕೆಲಸದ ಹುಡುಗಿ ಸಹ್ಯಾದ್ರಿ ಚಳಿ ಮಳೆ […]

ಮಹಾಪ್ರಸ್ಥಾನವನ್ನು ಇನ್ನೊಮ್ಮೆ ಓದಿದಾಗ

Published on :

ಅನಿಸುತ್ತದೆ ನನ್ನ ಕಥಾನಾಕನನ್ನು ಹೀಗೆ ಒಂಟಿಯಾಗಿ ಬಿಡಬಾರದಾಗಿತ್ತು ಎಂದು.  ಆದರೆ ಬಿಟ್ಟಿದ್ದನೆಲ್ಲಿ ಇವುನು ನನ್ನನ್ನು ವರ್ಷಗಟ್ಟಲೆ ಸದಾ ತಲೆಯೊಳಗೆ ಹೊಕ್ಕು ಊಟ ನಿದ್ದೆಗೆ ಬಿಡದೆ ಮಳೆಗೆ ಸೋರುವ ಬಿಸಿಲಿಗೆ ಸುಡುವ ಬಾಡಿಗೆಮನೆಯಲ್ಲೂ ಮಂಚದ ಮೇಲೆ ಅಥವ ಧೂಳು ತುಂಬಿದ ಮೇಜಿನಮೇಲೆ ಎಲ್ಲೆಂದರಲ್ಲಿ ಕಾಗದದ ಚೂರುಗಳಲ್ಲಿ ಅರ್ಧಂಬರ್ಧ ಇಳಿಸಿಕೊಂಡು ಹೊಡೆದು ಹಾಕಿಸಿಕೊಂಡು ಹೇಗು ಹೇಗೋ ಮೈಗೂಡಿಸಿಕೊಂಡು ಕ್ರಮೇಣ ತನ್ನ ಸ್ವರ್ಗದ ಆನ್ವೇಷಣೆಯಲ್ಲಿ ಹೊರಟುಹೋದವನು ಮರಳಿ ಕೈಗೆಟಕುವುದಿಲ್ಲ. ಅನಿಸುತ್ತದೆ ಹಾಗೆ ಬರೆಯಬಾರದಾಗಿತ್ತು ಬೇರೆ […]

ಬೇಡಾಂದ್ರು ಕೇಳಲ್ಲ

Published on :

ಕತ್ತಲಾಗಿ ಬಿಡುತ್ತೆ ಬೇಡವೆಂದರೆ ಕೇಳದೇ ಇಲ್ಲೇ ಉಪ್ಪಿನಂಗಡಿಗೆ ಹೋಗಿ ಬರ್‍ತೇನೇಂತ ಹೋದ ಮಾರಾಯ ಸೂರ್ಯ ಸಾಮಿ ಮಾರನೇ ದಿನ ಮುಂಜಾವಿಗೇ ವಾಪಸ್ಸು ಬಂದದ್ದು, ನೋಡಿ ಮಾರಾಯ್ರೇ, ಎಂಥಾ ಆಸಾಮಿ *****

ಮಂಥನ – ೭

Published on :

“ಅಭಿ, ಏನೋ ಮಾತಾಡಬೇಕು ಅಂತಾ ಕರ್ಕೊಂಡು ಬಂದು, ಸುಮ್ನೆ ಕೂತ್ಕೊಂಡುಬಿಟ್ಟಿದ್ದೀರಲ್ಲಾ” ಅವನ ಒದ್ದಾಟ ನೋಡಲಾರದೆ ಅನು ಒತ್ತಾಯಿಸಿದಳು. “ಅನು… ಅದು… ಅದು…” ಅವಳ ಮುಖ ನೋಡುತ್ತಾ, ಆ ಕಣ್ಣುಗಳಲ್ಲಿ ಯಾವ ಅರ್ಥವನ್ನೂ ಹುಡುಕಲಾರದೆ, ತನ್ನ ಪ್ರಯತ್ನದಲ್ಲಿ ಸೋಲೊಪ್ಟಿಕೊಳ್ಳುವಂತೆ ಮಾತು ನಿಲ್ಲಿಸಿಬಿಟ್ಟ. “ಅಭಿ, ಪ್ಲೀಸ್ ಅದೇನು ಹೇಳಿ.” ಉಗುಳು ನುಂಗುತ್ತಾ ಮಾತಿಗಾಗಿ ತಡಕಾಡಿದ. ಹುಂ ಹೂಂ ಅವನ ಬಾಯಿಂದ ಸ್ವರ ಹೂರಡಲೇ ಇಲ್ಲ. ಅನು ಸಾಮಾನ್ಯವಾದ ಹುಡುಗಿಯಲ್ಲ. ಇಂತಹ ವಿಷಯಗಳನ್ನೆಲ್ಲ ಹೇಗೆ […]

ಹೇಗೆ ಸಹಿಸಲೇ ಇದರಾಟ!

Published on :

ಹೇಗೆ ಸಹಿಸಲೇ ಇದರಾಟ ತಾಳಲಾರೆ ತುಂಟನ ಕಾಟ ಸಣ್ಣದಾದರೂ ಶುದ್ಧ ಕೋತಿ ಸಾಕಮ್ಮ ಇದ ಸಾಕಾಟ! ನೂರು ಇದ್ದರೂ ಸಾಲದು ಬಟ್ಟೆ ನಿಮಿಷ ನಿಮಿಷಕೂ ಒದ್ದೆ! ತೂಗೀ ತೂಗೀ ತೂಕಡಿಸುತ್ತಿರೆ ನಗುವುದು ಬೆಣ್ಣೇ ಮುದ್ದೆ! ಕೇಕೆ ಹೊಡೆವುದು ಕೋಗಿಲೆಯಂತೆ ಗರ್ಜನೆಯಂತೂ ಹುಲಿಯೆ; ಕಣ್ಣೀರಿಲ್ಲದೆ ಅಳುವುದು ಸುಳ್ಳೇ, ಉಪಾಯದಲ್ಲಿದು ನರಿಯೇ! ರಾಮನೆ ಮಗನಾಗಲಿ ಎಂದಿದ್ದೆ ಬಂದುದೊ ರಾಮನ ಬಂಟ! ಅಮ್ಮನೆ ಬೇಕು ಇಡಿದಿನ ಜೊತೆಗೆ, ಅಪ್ಪನ ಥರವೇ ಇದರಾಟ! *****

ಲಿಂಗಮ್ಮನ ವಚನಗಳು – ೮೯

Published on :

ಮನವ ಗೆದ್ದೆವೆಂದು ತನುವ ಕರಗಿಸಿ, ಕಾಯವ ಮರಗಿಸಿ ನಿದ್ರೆಯ ಕೆಡಿಸಿ, ವಿದ್ಯೆಯ ಕಲಿತೆನೆಂಬ ಬುದ್ಧಿಹೀನರಿರಾ, ನೀವು ಕೇಳಿರೋ, ನಮ್ಮ ಶರಣರು ಮನವನೆಂತು ಗೆದ್ದರೆಂದರೆ, ಕಾಮ, ಕ್ರೋಧವ ನೀಗಿ, ಮೋಹ ಮದ ಮತ್ಸರವ ನಿಶ್ಚೈಸಿ, ಆಕೆ ರೋಷವಳಿದು, ಜಗದ ಪಾಶವ ಬಿಟ್ಟು, ಮರುಗಿಸುವ ಕಾಯವನೆ ಪ್ರಸಾದವ ಮಾಡಿ ಸಲುಹಿದರು. ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ, ಸುಖವ ನಡಸಿ, ಜಗವ ಗೆದ್ದ ಶರಣರ ಬುದ್ಧಿ ಹೀನರೆತ್ತ ಬಲ್ಲರೋ ಅಪ್ಪಣಪ್ರಿಯ ಚನ್ನಬಸವಣ್ಣಾ? *****

ನಮ್ಮ ಹೂವುಗಳು

Published on :

ಹೂವರಳಿ ನಿಂತು ಕಾಯಾಗಲೆಂದು ಕಾದೂ ಕಾದೂ ಕಣ್ಣು ಬೆಳ್ಳಗಾಗುತ್ತವೆ ಮೊಗ್ಗಿದ್ದಾಗಿದ್ದ ಮುರುಕ ಮೊನಚೆಲ್ಲಾ ಬಿಚ್ಚಿಟ್ಟ ಎಸಳಿನೊಳಗೆ ಮುದುರಿ ಹೋಗುತ್ತದೆ ಅದೇ ಅರಳಿದಾಗ ನಕ್ಕಿದ್ದು ಅರುಣೋದಯದಂತೆ ಕ್ಷಣಿಕ ಬಿಸಿಲೇರಿದಂತೆಲ್ಲಾ ಈ ಹೂಗಳಿಗೆ ಅಗ್ನಿದಿವ್ಯ ಕಾಲ ಕಾಯಲು ಹೆದರಿ ಕೆಲವು ಉದುರಿಯೇ ಹೋಗುತ್ತವೆ ಹಣ್ತನ ಅವಕ್ಕೊಂದು ಕಲ್ಪನೆಯ ಕಗ್ಗ ಕೆಲವು ಎಲೆಮರೆಯೊಳಗೇ ತುಂಬಿಗಳಿಂದ ಮಬ್ಬು ತುಂಬಿಸಿಕೊಳ್ಳುತ್ತವೆ ಕಾಯಿ-ಹಣ್ಣಾಗುವ ಬದಲು ಕಾತದ್ದು ಕೀತ ಹುಣ್ಣಾಗುತ್ತದೆ ಹಾಡಾ ಹಗಲೆ ಕಾವಳ ಮುಚ್ಚಿಕೊಳ್ಳುತ್ತದೆ ಕೆಂಪು ದೀಪದ ಕೆಳಗೆ […]