ಮನವ ಗೆದ್ದೆವೆಂದು ತನುವ ಕರಗಿಸಿ,
ಕಾಯವ ಮರಗಿಸಿ ನಿದ್ರೆಯ ಕೆಡಿಸಿ,
ವಿದ್ಯೆಯ ಕಲಿತೆನೆಂಬ ಬುದ್ಧಿಹೀನರಿರಾ,
ನೀವು ಕೇಳಿರೋ, ನಮ್ಮ ಶರಣರು
ಮನವನೆಂತು ಗೆದ್ದರೆಂದರೆ, ಕಾಮ,
ಕ್ರೋಧವ ನೀಗಿ, ಮೋಹ ಮದ ಮತ್ಸರವ ನಿಶ್ಚೈಸಿ,
ಆಕೆ ರೋಷವಳಿದು, ಜಗದ ಪಾಶವ ಬಿಟ್ಟು,
ಮರುಗಿಸುವ ಕಾಯವನೆ ಪ್ರಸಾದವ ಮಾಡಿ ಸಲುಹಿದರು.
ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ,
ಸುಖವ ನಡಸಿ, ಜಗವ ಗೆದ್ದ ಶರಣರ
ಬುದ್ಧಿ ಹೀನರೆತ್ತ ಬಲ್ಲರೋ
ಅಪ್ಪಣಪ್ರಿಯ ಚನ್ನಬಸವಣ್ಣಾ?
*****