ಕಾಡುಬೆಳದಿಂಗಳು

ಅಂತರಾಳ ಬೇರುಗಳ ಭಾವಸ್ಪರ್ಶಕೆ
ಸಹ್ಯಾದ್ರಿಯ ತುಂಬೆಲ್ಲ ಹಸಿರು.
ಎಣ್ಣೆ ಹಚ್ಚಿ ಎರೆದ ಮಿರುಗು
ಗತ್ತಿನ ಮಾತು ವಯ್ಯಾರ
ಗಗನ ಚುಂಬಿಸುವ ಹಂಬಲ.

ನೂರು ಸಾವಿರ ಮಾತುಗಳ
ಒಳಗೊಳಗಿನ ಚಡಪಡಿಕೆಗೆ ಮೌನ
ಆದರೂ ಎಷ್ಟೊಂದು ಸ್ಪಷ್ಟ
ಕಡಲ ನೆರೆತೊರೆ ಏರುಬ್ಬರ
ಎಷ್ಟೊಂದು ತಿಳಿ ಒರತೆಯನೀರು
ಪಚ್ಚೆ ಹಸಿರು ಹೊಳೆವ ಕಣ್ಣಿನ
ಈ ಸಹ್ಯಾದ್ರಿ ಕುಸುಮ ಮಾಲೆ.

ಮಾಗಿ ಚಳಿ ಮಂಜು ಮುಸುಕು
ಬಿರುಸಿನ ಓಡಾಟದ ಕೆಲಸದ ಹುಡುಗಿ
ಸಹ್ಯಾದ್ರಿ
ಚಳಿ ಮಳೆ ಬಿಸಿಲೆಲ್ಲ ಬಲುದೂರ
ಮುಖ ತುಂಬ ಮುಗ್ದ ನಗು
ಕನಸುಕಣ್ಣಿನ ಹುಡುಗಿಗೆ
ಸೂರ್ಯ ಬರುತ್ತಾನೋ ಇಲ್ಲೋ!

ಕತ್ತಲಲಿ ಕರಗದ ಮನಸಿಗೆ
ಒಂದಿಷ್ಟು ನೆಮ್ಮದಿ ಏಕಾಂತ,
ತನ್ನೊಳಗಿನ ಪಿಸುಮಾತುಗಳಿಗೆ
ತಾನೇ ಕೆನೆಬೆಳಕಾಗಿ ಉಸಿರಾಗಿ-
ಸಹ್ಯಾದ್ರಿ ತುಂಬೆಲ್ಲ ತಂಪು ಬೆಳದಿಂಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಪ್ರಸ್ಥಾನವನ್ನು ಇನ್ನೊಮ್ಮೆ ಓದಿದಾಗ
Next post ಅನುಕರಣೆ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…