ಇದು ಕಲಿಕಿಯಲ್ಲ, ಏನೋ ಬೆರಿಕಿ ಅಲ್ಲಲ್ಲಿ ತುರಿಕೆ ಬಂದಽದ ಮುಂದ ಇರಬೇಕು ಏನೊ ಇತಿಹಾಸ ಹಿಂದ. ಹೀಂಗಾದರ ಹ್ಯಾಂಗ ಅನಬ್ಯಾಡ ಇದ್ದಾನ ಶಿವಾ ಮ್ಯಾಲ ಶಕ್ತಿ ಆಟಂತ ಭಲೆ ಭಲೆ ಜನರು ಮುಣುಗ್ಯಾರ ಶಿವ ಶಿವಾ ಕೊನಿಗೆ ಅಂದಾರ. ಈ ಸೆರಗು ಹರಕೊಂಡ ಸಗತಿ ಬಾಳೆ ...

ವ್ಯಕ್ತಿಯಲ್ಲವು ಗಾರ್ಕಿ! ಆದು ಮಹತ್ತಮ ಶಕ್ತಿ! ಅವ್ಯಕ್ತದನುಭೂತಿ ತಾನೆ ಮೈವೆತ್ತಂತೆ ಭವ್ಯಾತ್ಮನುಸಿರೆ ಘನ ಸಂಗೀತವಾದಂತೆ ಮುಕ್ತ ಮನ ಮೈದುಂಬಿ ತನ್ನ ಮೈ ಮರೆತಂತೆ ಭವ್ಯತೆಯ ಭಾವನಾ ಲಹರಿ ಚಿಗುರೊಡೆದಂತೆ ವ್ಯಕ್ತ ವೇಷದಿ ಸುಪ್ತ ಸಾಮರ್ಥ್ಯಕಿದು ಯು...

ಗಾನ, ಮೆಲುಪಿನ  ಕೊರಲು ಕುಗ್ಗಲು, ಹೊಳಲು ಕೊಡುವುದು ಮನದೊಳು, ಕಂಪು, ಮೊಲ್ಲೆಯ ಸೊಂಪು ಸೊರಗಲು, ತಿಳಿದ ಕರಣದೊಳುಳಿವುದು. ಕಳಚಿದೆಸಳು, ಗುಲಾಬಿ ಕಂದಲು, ತಳಿವುದಿನಿಯಳ ಶಯನವ. ನಿನ್ನ ಬಗೆಗಳೊ-ನೀನು ಹೋಗಲು, ಒರಗಿ, ಒಲುಮೆಯ ಬಗೆವುದು. ***** SHE...

ಪ್ರಕೃತಿಯಾ ಮಡಿಲಿನಲಿ ಕಡಲಿನೀ ತಡಿಯಲ್ಲಿ ಎಲ್ಲ ಇದೆ! ಮನಕಿಂದು ಶಾಂತಿಯೊಂದಿಲ್ಲ ॥ ಪಲ್ಲವಿ ॥ ತುಂಬು ಚಂದಿರನು ಬಹನೆನುತ ಸಾರಿಸಿದಂತೆ ಗಗನದಂಗಣವಿಂದು ಅತಿಶುಭ್ರ ನೀಲ! ಮುಗಿಲುಕಡಲುಗಳೊಳಗೆ ಬಿಂಬ ಪ್ರತಿಬಿಂಬಗಳು ಆವುದೋ! ಒಡೆಯಲಿಕಭೇದ್ಯವೀ ಜಾಲ! ...

ಮಾನಾಪಮಾನವನು ತೊರೆದು ಬಂದೆನು ನಲ್ಲೆ ಏನಾದರೇನೆನಗೆ ನೀನೆ ಗತಿ ನಾ ಬಲ್ಲೆ ನೀನೊಲಿದು ಮುದ ಬೀರೆ, ನಿನ್ನ ನಗೆ ಮೊಗದೋರೆ, ನಾನಹುದು ನಿನ್ನ ಬಗೆ ಮುಗಿಲೊಳಿಹ ಧೃವತಾರೆ. ಎನ್ನಂತರಂಗದಲಿ ನೀನೆ ನರ್ತಿಸುತಿರುವೆ ನಿನ್ನ ಪ್ರತಿಬಿಂಬ ನಾನಂತೆ ವರ್ತುಸುತ...

ಮರುಗುವೆಯ ನೀ ಗೆಳೆಯ ನಮ್ಮ ನಾಡಿನ ಪರಿಗೆ: ಜನವಿದಭಿಮಾನಕೃಪಣಮಸೂಯಾಭೂಯಿಷ್ಠ- ಮನುಕರಣಪಟು ನಟನಶೀಲಮನವಸ್ಥಿತಂ ಸಿರಿಯೊ ತಂದ್ರೋಪಹತಮುಚ್ಛಿಷ್ಟಭೋಗಿಮನ- ಮಸುರಲೋಭೋತ್ಸೃಷ್ಟವಿಜ್ಞಾನಯಂತ್ರಮದ- ವಾರಣಾವಿಷ್ಟ ನಾಗರಿಕ ನಿಸ್ವಾದು ನಿ- ಸ್ಸಾರಜೀವನಂ ಸ್ವಲ...

ಮುದವೇ ವಿಮಲಾ ಬಾಳುವೆಬೆಲ್ಲಾ ಇದುವೇ ಪಲ್ಲನ ಹಾಡಿನ ಪಲ್ಲಾ || ಪಲ್ಲ || ೧ ನೀನು ಬೆಲ್ಲಾ ನೀನೇ ಬೆಲ್ಲಾ! ನಿನ್ನ ಪಲ್ಲಾಕಾಕಾನು ಬೆಲ್ಲಾ ನೀನೂ ಬೆಲ್ಲಾ ನಾನೂ ಬೆಲ್ಲಾ ಬೆಲ್ಲಾ ಬೆಲ್ಲಾ ಎಲ್ಲಾ ಬೆಲ್ಲಾ! ೨ ನಮ್ಮ ವಿಮಲನ ಸಕ್ಕರಿ-ಕೈಗೆ ಒಂದು &#8220...

ಬಂಡನೋರ್ವ ತಾ ರಂಡಿಯ ಮನೆಯೊಳು, ಹೆಂಡಕುಡಿದು ನಿಶೆಯಾಗುತಲವನೂ | ಹೆಂಡಿರು ಮಕ್ಕಳ ಪರಿವೆಯು ಯಿಲ್ಲದೆ, ಕಂಡಹಾಗೆ ತಾ ಜೋಲಿಯ ಹೊಡೆಯುತೇ | ಕಂಡಕಡೆಗೆ ತಾನೂರೊಳು ತಿರುಗುತೆ, ಬಂಡಬಂಡತಾ ಬೈಗಳ ಬೈಯ್ಯುತೆ ಅಂಡಜೋದ್ಭವನ ಸೃಷ್ಠಿಯೊಳುತಾ, ಚಂಡವಿಲಕ್ಷಣ ...

1...2122232425...933

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...