ಸುಖದ ಸೆರೆಯಾಗಿ ಬಂತು,
ದುಃಖದ ಮರೆಯಾಗಿ ಬಂತು
ನನ್ನ ಮಗುವಿನ ಮಮತೆ.
ಹಿಗ್ಗಿನ ತೊರೆಯಾಗಿ ಬಂತು,
ನಗೆಯ ತೆರೆಯಾಗಿ ಬಂತು,
ನನ್ನ ಮಗುವಿನ ಮಮತೆ.
ತಳಮಳದ ನೆರೆಯಾಗಿ ಬಂತು,
ಕಳವಳದ ನೊರೆಯಾಗಿ ಬಂತು,
ನನ್ನ ಮಗುವಿನ ಮಮತೆ.
ಮುಗಿಲಿನ ಸೆರೆಯಾಗಿ ಬಂತು,
ಜಗದ ದೊರೆಯಾಗಿ ಬಂತು,
ನನ್ನ ಮಗುವಿನ ಮಮತೆ.
*****


















