ನಿಲ್ಲು ನಿಲ್ಲು ನಿಲ್ಲು ಓ ಮಾನವ
ಎಲ್ಲಿಗೆ ನಿನ್ನೋಟ ಹೇಳಲಾಗದೆ!
ಕ್ಷಣ ಹೊತ್ತು ಕಂಡ ಈ ತನುವಿಗೆ
ಸದಾ ಅಮರವೆಂಬ ಭ್ರಮೆ ಎನ್ನುವುದೆ!
ದುಕ್ಕ ಕಷ್ಟಗಳ ಇದು ಸಾಗರ
ಆಸೆ ಕನ್ಸುಗಳೆಲ್ಲ ಇಲ್ಲಿ ಪಾಚಿ ಪಾಚಿ
ಕೈಗೆ ನಿಲುಕಲಾಗದ ಗಗನಗೊಂಬೆ
ಮತ್ತೇಕೆ ಅಂಗಲಾಚುತ್ತಿ ಕೈಯಚಾಚಿ
ಕರ್ಮಭಂಧನಗಳಲಿ ಬೆರೆತು ನೀನು
ಹಳಿದುಕೊಳ್ಳುತ್ತಿರುವೆ ನಿನ್ನ ಹಣೆ ಬರಹ
ಮತ್ತೆ ಮಾಡುತಿರುವೆ ನಿತ್ಯ ಕುಕರ್ಮ
ಬೇಡುತ್ತಿರುವೆ ದೇವನಲ್ಲಿ ನಿತ್ಯ ವರಹ
ಇಲ್ಲೆಲ್ಲರೂ ಕರ್ಮಗಳಿಗಂಟಿದ ಏಕಾಂಗಿಯರು
ಮತ್ತೇ ಸುಖ ಅರೆಸುತಿಹರು ಅನ್ಯರಿಂದ
ಸುಖ ಕಂಡಲರಿಯದವರು ಸುಖ ನೀಡಲುಂಟೆ!
ಮಾಣಿಕ್ಯ ವಿಠಲನೇ ಆನಂದ
*****
















