Home / ಕಥೆ / ಕಾದಂಬರಿ / ಅವಳ ಕತೆ – ೧೨

ಅವಳ ಕತೆ – ೧೨

ಅಧ್ಯಾಯ ಹನ್ನೆರಡು

ಮಧ್ಯಾಹ್ನ ಸುಮಾರು ಮೂರನೆಯ ಝಾವದ ಕೊನೆಯಿರಬಹುದು. ದರ್ಬಾರು ಭಕ್ಷಿಯವರು ಆಚಾರ್ಯರನ್ನು ಕಾಣಲು ಬಂದಿದ್ದಾರೆ. ಆಚಾರ್ಯರಿಗೆ ಆದಿನ ಉಸವಾಸ. ಸಾಮಾನ್ಯವಾಗಿ ಆವರ ಶಿಷ್ಯರಲ್ಲದೆ ಇನ್ನು ಯಾರೂ ಆದಿನ ಅವರನ್ನು ನೋಡುವಂತಿಲ್ಲ. ಆದರಿಂದ ಅವರು ಒಳಗೆ ಏಕಾಂತದಲ್ಲಿ ಕುಳಿತಿರುವರು.

ಏಕಾಂತದಲ್ಲಿ ಕುಳಿತಿದ್ದವರಿಗೆ ಭಕ್ಷಿಯವರು ಬಂದಿರುವ ಸಮಾಚಾರ ತಿಳಿಯಿತು. ಆಚಾರ್ಯರ ಪ್ರತಿನಿಧಿಯಾಗಿ ಗೋಪಾಲರಾಯರು ಬಂದು ಅವರನ್ನು ಕರೆದುಕೊಂಡುಹೋಗಿ ಒಳಗೆ ಸುಖಾಸನದಲ್ಲಿ ಕುಳ್ಳಿರಿಸಿದರು. “ಈದಿನ ಆಚಾರ್ಯರಿಗೆ ಉಪವಾಸದ ದಿನ. ಅದರಿಂದ ದರ್ಬಾರಿಗಳ ದಿರಸ್ಸು ಹಾಕಿಕೊಳ್ಳುವುದಿಲ್ಲ. ಹಾಗೆ ಬಂದು ನೋಡಿದರೆ ತಪ್ಪಿಲ್ಲವಲ್ಲ?”ಎಂದು ಕೇಳಿದರು. ಭಕ್ಷಿಯವರು, “ನಾವು ತುರುಕರು. ಈದಿನ ಆಚಾರ್ಯರು ನಮ್ಮನ್ನು ನೋಡುವುದಿಲ್ಲ ಎಂದರೂ ನಾವು ಅದಕ್ಕೆ ಸಿದ್ಧ. ಇದೋ ಇವರು ನಮ್ಮ ಗವಾಯ್‌ ಸಾಹೇಬರು. ಇವರು ದಿಲ್ಲಿಯಲ್ಲಿದ್ದವರು. ಈಗ ಬೀದರ್‌ ನಲ್ಲಿ ಇದ್ದಾರೆ. ಇವರು ಆಚಾರ್ಯರನ್ನು ಕಂಡು ಸಲಾಂ ಮಾಡಿ ಹೋಗ ಬೇಕು ಎಂದು ಬಂದಿದ್ದಾರೆ. ಅವರಿಗೆ ತೊಂದರೆ ಇಲ್ಲವಾದರೆ ನಮಗೆ ದರ್ಶನ ಆಗಲಿ”ಎಂದರು.

ಆಚಾರ್ಯರು ಒಂದು ಉತ್ತರೀಯವನ್ನು ಹೊದೆದಿದ್ದಾರೆ. ಗರಿಮುರಿ ಯಾಗಿ ಉಟ್ಟಿರುವ ಪಂಚೆ ಅಚ್ಚುಕಟ್ಟಾಗಿದ್ದು ಅವರ ವೈದಿಕನಿಷ್ಠೆಯನ್ನು ತೋರಿಸುತ್ತಿದೆ. ಆ ಎರಡರ ಕಲಾಪತ್ತಿನ ಅಂಚುಗಳೂ, ತೆಳುವೂ, ನಯವೂ ಅವರ ಆಧ್ಯತೆಯನ್ನು ತೋರಿಸುತ್ತಿವೆ. ಅವರ ದೇಹವು ಚಿನ್ನದ ಬಣ್ಣ ವಾಗಿದ್ದು ತಾನೆಷ್ಟು ಸುಖವಾಗಿದ್ದೇನೆ ಎಂಬುದನ್ನು ಬಾಯಿಬಿಟ್ಟು ಹೇಳಿ ಕೊಳ್ಳುತ್ತಿದೆ. ಕಂಠದಲ್ಲಿರುವ ತುಲಸೀಮಣಿಗಳ ಸರವು ಅವರ ದೈವಭಕ್ತಿ ಯನ್ನು ಹೇಳುತ್ತಿದ್ದರೆ ಕೈಗಳಲ್ಲಿರುವ ಥೋಡಾಗಳೂ, ಬೆರಳುಗಳಲ್ಲಿರುವ ಉಂಗುರಗಳೂ ಅವರಿಗೆ ದೊರಕಿರುವ ರಾಜಾನುಗ್ರಹವನ್ನು ಪ್ರಕಟಸುತ್ತಿವೆ. ಆಚಾರ್ಯರು ಬಂದು ದೂರದಲ್ಲಿ ಹಾಕದ್ದ ಒಂದು ಕೃಷ್ಣಾಜಿನದ ಮೇಲೆ ಕುಳಿತರು. ಆಗಂತುಕರಿಗೆ ತಾವು ವಂದಿಸಿ, ಅವರ ಪ್ರತಿವಂದನೆಗಳನ್ನು ಸ್ವೀಕರಿಸಿ, ಕುಶಲಪ್ರಶ್ನೆ ಪ್ರಥಮೋಪಚಾರವನ್ನು ಸಲ್ಲಿಸಿದರು. ದರ್ಬಾರ್‌ ಭಕ್ಷಿಯವರು ಆಚಾರ್‍ಯರಿಗೆ ಗವಾಯ್‌ ಸಾಹೇಬರ ಪರಿಚಯವನ್ನು ಮಾಡಿ ಕೊಟ್ಟರು.

ಹಾಗೆಯೇ ಒಂದು ಅಷ್ಟುಹೊತ್ತ ಸುಖಸಲ್ಲಾಪಗಳು ನಡೆದಮೇಲೆ ಆಚಾರ್ಯರು ಹೇಳಿದರು. “ಇವೊತ್ತಿನ ದಿವಸ ತಾವು ದಯಮಾಡಿಸಿದ್ದೀರಿ. ನಾನು ಇವೊತ್ತಿನ ದಿವಸ ಏನೂ ತೆಗೆದುಕೊಳ್ಳುವುದಿಲ್ಲ. ಅದರಿಂದ ತಾವು ಕೋಪಗೊಳ್ಳಬಾರದು. ಭಕ್ಷಿಿಯವರು ದೊಡ್ಡ ಮನಸ್ಸುಮಾಡಿ ಇಲ್ಲಿಗೆ ಇನ್ನೊಂದು ದಿವಸ ದಯಮಾಡಿಸಬೇಕು. ಇವೊತ್ತಿನ ಹಾಗೆಯೇ ಗವಾಯ್‌ ಸಾಹೇಬರನ್ನೂ ಜೊತೆಯಲ್ಲಿ ಕರೆದುಕೊಂಡು ಬರಬೇಕು. ನಮ್ಮ ಆತಿಥ್ಯ ವನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನು ಮಾಡಬೇಕು” ಎಂದು ನಗು ನಗುತ್ತ ಮಾತಿನ ಅರ್ಥವನ್ನು ಪ್ರಕಟಸುವ ಹಾವ, ಭಾವ, ಮುದ್ರೆಗಳನ್ನು ಪ್ರದರ್ಶಿಸುತ್ತ ಹೇಳಿದರು.

ಭಕ್ಷಿಯವರು ಗವಾಯ್‌ ಸಾಹೇಬರ ಮುಖವನ್ನು ನೋಡಿದರು. ಆವರು ಹೃದಯದಲ್ಲಿ ತುಂಬಿರುವ ಸಂತೋಷವನ್ನು ತಮ್ಮ ಅರಳಿದ ಮುಖವೇ ಹೇಳುತ್ತಿರಲು, “ಗವಾಯ್‌ ಸಾಹೆಬ್‌, ತಾವು ನಮ್ಮನ್ನು ಇವೊತ್ತು ಬಂದು ನೋಡಿದ್ದೇ ನಮ್ಮ ನಸೀಬ್‌. ಇಲ್ಲಿಗೆ ಬಂದಮೇಲೆ ತಮ್ಮದು ಉಪವಾಸ ಅಂತ ಕೇಳಿ ಮನಸ್ಸು ಷಿಕ್ಕಾ ಆಗಿಹೋಗಿತ್ತು. ಈಗ ಮೂರು ದಿನದಿಂದ ತಮ್ಮ ಗಾನಾ ಕೇಳಿದಾಗ ಜಿನ್ನತ್‌ಗೆ ಹೋಗಿದ್ಚೆವು. ಇವೊತ್ತು ತಮಗೆ ಅದನ್ನು ಸುಲಾವಣೆ ಮಾಡಬೇಕು ಎಂತಲೇ ಬಂದೆವು. ಆಗಲಿ. ಇವೊತ್ತು ತಮ್ಮದು ನಜರ್‌ ನಮ್ಮ ಮೇಲೆ ಬಿತ್ತು. ತಾವು ಈ ದಿನ ಖುದಾನ ಜೊತೆಯಲ್ಲಿ ಇರಿ. ಇನ್ನು ಮೂರು ನಾಲ್ಕು ದಿನ ಬಿಟ್ಟು ತಮ್ಮ ಶಿಷ್ಯರದು ಗಾನಾನೂ ಕೇಳಿ ಆಮೇಲೆ ಬಂದು ದರ್ಶನ ಪಡೆಕೊಳ್ಳುತ್ತೇನೆ. ಗರೀಬನ ಮೇಲೆ ಕೃಪಾ ಇರಬೇಕು.” ಎಂದು ಬಹು ವಿನಯ ವಿಶ್ವಾಸಗಳಿಂದ ಹೇಳಿ ಕೊಂಡರು.

ಆಚಾರ್ಯರೂ ಸಂತೋಷಸಟ್ಟರು. “ಗವಾಯ್‌ ಸಾಹೆಬ್‌, ಸಂಗೀತ ಕಲಿತು, ಅದನ್ನು ದೇವರನ್ನು ಒಲಿಸಿಕೊಳ್ಳು ವುದಕ್ಕೆ ಉಪಯೋಗಿಸುವವರು ಎಂದೂ ಗರೀಬರಲ್ಲ. ತಮ್ಮ ಹಾಗೆ ವಿದ್ಯಾವಂತರೂ, ಭಕ್ತರೂ ಆದವರು ಲೋಕದ ಬೆನ್ನುಮೂಳೆಗಳ ಹಾಗೆ. ತಾವು ಯಾವಾಗ ಬೇಕಾದರೂ ಬರಬಹುದು. ಇದು ತಮ್ಮ ಮನೆ. ತಮ್ಮಂಥವರು ನಮಗೆ ದರ್ಶನಕೊಟ್ಟರೆ ನಮ್ಮ ವಿದ್ಯೆಯ ಅಧಿದೇವತೆ ಶಾರದಾದೇವಿಯೇ ನಮಗೆ ದರ್ಶನಕೊಟ್ಟಂತೆ. ಇವೊತ್ತು ಏಕಾದಶಿ. ಹದಿನೈದು ದಿನಕ್ಕೆ ಒಂದು ಸಲ ಬರುತ್ತದೆ. ಆ ಒಂದು ದಿನ ತಾವು ತಮ್ಮ ರಂರ್ಜಾ ಹಬ್ಬ ಮಾಡುವ ಹಾಗೆ ಉಪವಾಸಮಾಡಿ ರಾತ್ರಿ ಯಲ್ಲಿ ಒಂದು ಸಲ ಪೂಜೆಮಾಡಿ, ಉಳಿದ ಹೊತ್ತನ್ನೆಲ್ಲ ಭಜನೆಯಲ್ಲಿ ಕಳೆಯು ವುದು ಸಂಪ್ರದಾಯ. ಅದನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ನಮ್ಮವರು ಇದನ್ನು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಅದರಿಂದ ಇವೊತ್ತು ಬಹಳಹೊತ್ತು ಕುಳಿತುಕೊಳ್ಳಲಿಲ್ಲ ಎಂದು ತಮ್ಮ ಮನಸ್ಸಿಗೆ ಆಯಾಸ ವಾಗದಿರಲಿ. ತಾವು ಅಗತ್ಯವಾಗಿ ಇನ್ನೊಂದು ದಿವಸ ದಯಮಾಡಿ. ಸಂತೋಷವಾಗಿ ಒಂದು ಝಾವ ಹೊತ್ತು ಕುಳಿತುಕೊಳ್ಳೋಣ” ಎಂದರು. ಹೀಗೆಯೇ ಇನ್ನೂ ಆ ಅಷ್ಟು ಹೊತ್ತು ಮಾತನಾಡುತ್ತಿದ್ದು ಭಕ್ಷಿಯವರೂ, ಗವಾಯ್‌ ಸಾಹೇಬರೂ ಆಚಾರ್‍ಯರನ್ನು ಬೀಳ್ಕೊಂಡು ಹೊರಟರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...