ಧನ್ಯ ಗುರುವರ ಧನ್ಯ ಶಿವಹರ
ಮಾನ್ಯ ತಂದೆಯು ದೊರಕಿದಾ
ಬಾಳೆಹಳ್ಳಿಯ ಲಿಂಗಬಳ್ಳಿಗೆ
ಲಿಂಗಗೊಂಚಲು ಬೆಳೆಸಿದಾ ||
ಸಚ್ಚಿದಾನ೦ದಾತ್ಮಚಲುವರ
ಸತ್ಯವಂತರ ತೋರಿದಾ
ಜನುಮ ಜನುಮದ ಜೀವ ಜಾತ್ರೆಗೆ
ಲಿಂಗ ಕಥೆಯನ್ನು ಹೇಳಿದಾ
ಬಿಂದು ತ೦ದೆಯು ಸಿಂಧು ಸಾಗರ
ಜ್ಯೋತಿ ಕಿರಣವ ಹರಡಿದಾ
ಸತ್ಯ ಶಿವಾದ್ವೈತ ರಥವನು
ಜಗದ ತುಂಬಾ ಮೆರೆಸಿದಾ
ಮಾತು ಮ೦ತ್ರಾ ಮನವೆ ಯೋಗಾ
ಜ್ಞಾನಯಜ್ಞವ ಕಲಿಸಿದಾ
ನಾನತನದಲಿ ಲಿಂಗತನವನು
ತುಂಬಿ ಮಂಗಲ ಹಾಡಿದಾ
*****



















