ಬುಗರಿಯ ಬುಡದ ಮೊನೆಯ ಮೊಳೆ ನಾನು ಬಿಡಿಸಿರುವೆ ನೆಲದಲ್ಲಿ ಬಾಳ ರಂಗೋಲೆ ಹಾಡಿ ಸುವ್ವಾಲೆ! *****...
ಅಮವಾಸ್ಯೆಯ ಸೆರಗು ಮುಸ್ಸಂಜೆ ವಿಮಾನ ಏರುವುದು ಸಮುದ್ರ ದಾಟುವುದು ಬೇಡವೇ ಬೇಡ ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ- ವೀಸಾದ ಕೊನೆಯ ದಿನಾಂಕ ನೋಡು ಅಮ್ಮ ಹೊರಡಲೇಬೇಕು ಹೊಸ್ತಿಲಿನ ಮೇಲಿರುವ ನನ್ನ ಅಸಹಾಯಕತೆ- ಅಪ್ಪನ ಧೈರ್ಯದ ಮಾತುಗಳು ಎರುಡು ದಿನಗಳ...
ಮುಚ್ಚಿದ ಕದವು ಕೇಳಿತು ಕಾತುರದಿ ಎಂದು ಬರುವೆಯೆಂದು ಒಳಗಿದ್ದ ಮನವು ಬೇಡಿತು ನೋವಿನಲಿ ಎಂದು ಬರುವೆಯೆಂದು ಖಾಲಿ ಬಿಳಿ ಹಾಳೆಯಂತಿದ್ದ ಎದೆಯು ನುಡಿಯಿತು ನೊಂದು ಗೋಡೆಯ ಸುಣ್ಣ ಬೇಡಿತು ಮಮತೆಯಲಿ ಎಂದು ಬರುವೆಯೆಂದು ಒಣ ಮರದ ಮೇಲೊಂದು ಗಿಣಿ ಕುಳಿತು...
ನಂಬೋ ನೀ ಮೊದಲು – ನಂಬಲು ನೀನಾಗುವೆ ಬದಲು; ನಂಬದ ಬಾಳೇ ಕಂಬನಿ ಕಡಲು ತನಗೆ ತಾನೆ ಉರುಳು. ನಂಬದೆ ಹೋದರೆ ಚಿಂತಿಲ್ಲ ಕಾಣದ ದೈವವನು; ನಂಬದಿದ್ದರೂ ಏನಂತೆ ಜಾಣರ ಧರ್ಮವನು; ನಂಬದೆ ಹೇಗೆ ನಡೆಯುವೆ ನೀ ಕಾಣುವ ಕಣ್ಣನ್ನು; ನಂಬದಿದ್ದರೆ ಗತಿಯೇ...
ಎಲ್ಲಾ ದಾರಿಗಳು ರೋಮಿಗೆ ಸೇರುತ್ತವೆ ನಿಜ. ಆದರೆ – ಎಲ್ಲರ ಪ್ರಯಾಣ ಅಲ್ಲಿ ಕೊನೆಗೊಳ್ಳುವುದಿಲ್ಲ! *****...
ಪಟ್ಟಣಕ್ಕೆ ಹೋಗುವೆನೆಂದು ಕುಣಿಯುತ್ತಿರುವ ತಮ್ಮ ಕುಮಾರ ಕಂಠೀರವ ತಂಗಿಯನ್ನು ನೋಡಿಯಾದರೂ ಬದಲಾಗಲಿ, ಅವಳ ಸಾಧನೆ ಅವನಿಗೆ ಸ್ಫೂರ್ತಿಯಾದೀತೆಂದು ನಿರೀಕ್ಷಿಸಿದ್ದರು ಸುಂದರೇಶ್. ಗಂಡು ಮಗನಾದ ತಮ್ಮ ಮಗನೇ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ. ತೋಟವೆಂದ...
ಇದೇನು ಭಾಗ್ಯವೊ ನಿನ್ನ ಕಂಡೆನು ಮರಳಿ ದಕ್ಷಿಣದ ಕಾಶಿ ಈಶ ಸದಮಲಾಭ್ಯುದಯೇಶ ನಮೊನಮೋ ಜಗದೀಶ ಮುದಿತಳಾದೆನೋ ಸ್ವಾಮಿ ಭಕ್ತಜನಪೋಷಾ ಹರಡಲೊಲ್ಲದು ನುಡಿಯು ನಿನ್ನ ಹಿರಿಮೆಯ ಬಗೆದು ಪರಮಾತ್ಮ ನೀಲಕಂಠ ಶಿರಬಾಗಿ ನಿಂದಿಹೆನು ಹಣ್ಣಾಗಿ ಬಂದಿಹೆನು ಪರಿಹರಿಸ...
ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ ಕರೆವುದೋ ರೂಢಿ ಮರುಧರೆ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






