(೧) ಹೃದಯ

ಒಂದು ಮುಷ್ಠಿ ಹೃದಯಕೆ
ಅದೆಷ್ಟು ಬಡಿತ ಅದೆಷ್ಟು ತುಡಿತ
ಎಲುಬು ಹಂದರಗಳ ಗಟ್ಟಿ ಸರಳುಗಳು
ಸುತ್ತೆಲ್ಲ ರಕ್ತಮಾಂಸಗಳ ಕಾವಲುಗಾರರು
ಎದೆಯಂಗಳದ ನಡುವೆ ಕುಳಿತ ‘ಬಾಸ್’
ಈ ಬೇಲಿಗೆ ನಾವು ಸ್ವತಂತ್ರರೇ ಅಲ್ಲ.

(೨) ಕಣ್ಣೀರು

ಕಣ್ಣೀರಿಗೂ ಮಾತುಗಳಿವೆ
ಅಳುಬುರುಕ(ಕಿ) ಅನ್ನದಿರಿ
ಹನಿ ಕೈಯಲ್ಲಿ ಹಿಡಿದುನೋಡಿ
ಭಾವಜೀವಿ ನೀವಾಗಿದ್ದರೆ
ಹೃದಯಕೆ ತಟ್ಟಿ ತಿಳಿಗೊಳ್ಳುವಿರಿ
ಇಲ್ಲವೆಂದಾದರೆ ನೀವು
ಕಟುಕ ವೇಷಧಾರಿ ಎಂದುಕೊಂಡುಬಿಡಿ.

(೩)ಪ್ರೀತಿ

ನಾವು ಮತ್ತೆ ಕಾಣಿಸಿಕೊಂಡೆವು
ಹೆಮ್ಮರದ (ಲಾಲ್‌ಬಾಗ್) ದಟ್ಟಹಸಿರು
ಹೂವಿನ ಸಾಮ್ರಾಜ್ಯದೊಳಗೆ.
ಇಲ್ಲೇ ಪ್ರೀತಿಯ ಮೊದಲುಮಾತು
ಆಶ್ವಾಸನೆ ಹೆಸರು ಏನೆಲ್ಲ ಈ ಮರದ
ಬುಡಕ್ಕೊರಗಿ ಕೆತ್ತಿದ್ದು.
*****