ಮಲವ ಮೀರಿದ ಚೆಲುವ ಚನ್ನಿಗ
ಮರಹು ನಿನಗಿದೋ ಕರ್ಪೂರಂ |
ಕಡಲು ಕರಗಿತು ಕಡಲ ಒಡಲಲಿ
ಮತ್ತೆ ಕಡಲು ಉಳಿಯಿತು
ಮುಗಿಲು ಕರಗಿತು ಮುಗಿಲ ಮೌನದಿ
ಮತ್ತೆ ಮುಗಿಲು ಬೆಳೆಯಿತು
ದಂಡೆ ಇಲ್ಲದ ದುಂಡು ಇಲ್ಲದ
ಅಬ್ಬ ಬೆಳಗಿನ ಉಂಡೆಯು
ಕೋಟಿ ಯುದ್ಧವ ಬೋಟು ಮಾಡುವ
ಮುಗಿಲಿನಾಜೆಯ ಗಂಟೆಯು
ಶಾಂತಿಯೊಂದೆ ಸಹಜ ರೂಪಂ
ನಿನ್ನ ಮಿಲನವ ಗೈಯಲು
ಮಧುರ ಚುಂಬನ ಮಿಲನ ಮಧುಬನ
ಜೀವದಾಚೆಗೆ ಜಿಗಿಯಲು
*****



















One Comment
ಉತ್ತಮವಾಗಿದೆ .