ನಾಲೆಯ ಪಕ್ಕದ ನಮ್ಮ ಮನೆಗೆ
ಬೆಳಕು ಬೆಟ್ಟ ಇಳಿದು ಬರುತ್ತಿದೆ.
ಬೆಟ್ಟದ ಮೇಲಿನ ಗವಿಗಳ ಮೇಲೆ
ಬಿಳಿಯ ಮೋಡಗಳು ಡೇರೆ ಹಾಕಿವೆ.
ಕಾಗೆಗಳು ಕೋಗಿಲೆಗಳು ಬಿಟ್ಟುಹೋದ ನಿಶ್ಯಬ್ದದಲ್ಲಿ,
ಅಸಹಾಯ ಜನಕ್ಕೆ ಯುದ್ಧದ ಭಯದಿಂದ
ನಿದ್ದೆ ಬರದಿರುವಾಗ,
ತೋಳಗಳು ಊಳಿಟ್ಟು ಹಬ್ಬ ಮಾಡುತ್ತಿವೆ.
*****
ಚೀನೀ ಮೂಲ: ಟುಫ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)